

ಕಲಬುರಗಿ: ಇಂದು ಫಾದರ್ಸ್ ಡೇ ಖುಷಿಯಲ್ಲಿ ಹಲವರು ತಂದೆಯೊಂದಿಗೆ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಅಗಲಿದ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ಆದರೆ ಅಪ್ಪನ ದಿನವೇ ಇಲ್ಲೊಂದು ತಂದೆಯ ಪಾಲಿಗೆ ಕೊನೆಯ ದಿನವಾಗಿದೆ. ಫಾದರ್ಸ್ ಡೇಯಂದೇ ವ್ಯಕ್ತಿಯೊಬ್ಬರು ತನ್ನ ಮಕ್ಕಳಿಬ್ಬರನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ್ದು, ಮೂವರೂ ಸಾವಿಗೀಡಾಗಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಪೋಚಾವರಂನಲ್ಲಿ ಈ ಪ್ರಕರಣ ನಡೆದಿದೆ. ಹಣಮಂತ (36) ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ. ಇವರು ತನ್ನ 6 ವರ್ಷದ ಪುತ್ರಿ ಅಕ್ಷತಾ, 9 ವರ್ಷದ ಪುತ್ರ ಓಂಕಾರ್ ಇಬ್ಬರನ್ನೂ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ್ದರು.
ಪತ್ನಿ ಮಕ್ಕಳೊಂದಿಗೆ ಹೈದರಾಬಾದ್ನಲ್ಲಿ ವಾಸಿಸುತ್ತಿದ್ದ ಹಣಮಂತ, ನಿನ್ನೆ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದರು. ಇಂದು ಮೂವರೂ ಇನ್ನಿಲ್ಲ ಎಂಬಂತಾಗಿದೆ. ಈ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.