ಯಶ್ ಭೇಟಿಗೆ ಹರಿದು ಬಂದ ಅಭಿಮಾನಿಗಳ ಸಾಗರ …

Yash 11
Published on

ಬೆಂಗಳೂರು: ಕಳೆದ ತಿಂಗಳಷ್ಟೇ ಯಶ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ದುಬೈಗೆ ಹೋಗಿದ್ದರಿಂದ, ಇಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ಆಗಿರಲಿಲ್ಲ. ಗುರುವಾರ ಯಶ್​ ಅವರನ್ನು ಭೇಟಿ ಮಾಡುವುದಕ್ಕೆ ಅಭಿಮಾನಿಗಳ ದಂಡೇ ಅವರ ಮನೆ ಎದುರು ಪ್ರತ್ಯಕ್ಷವಾಗಿದೆ.

ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಯಶ್​ ಹೇಳಿದ್ದರು. ಮುಂದೊಂದು ದಿನ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದರು. ಅದರಂತೆ, ಇಂದು ಕೆಲವು ಅಭಿಮಾನಿಗಳನ್ನು ಭೇಟಿಯಾಗುವುದಕ್ಕೆ ಯಶ್​ ಒಪ್ಪಕೊಂಡಿದ್ದರು.

ಈ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಗಾಲ್ಫ್​ಕೋರ್ಸ್​ ಎದುರಿಗಿರುವ ಯಶ್​ ಅವರ ನಿವಾಸದ ಮುಂದೆ ಜಮಾಯಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಯಶ್​ ಅವರನ್ನು ಭೇಟಿ ಮಾಡುವುದಕ್ಕೆ ಕ್ಯೂನಲ್ಲಿ ನಿಂತಿದ್ದಾರೆ. ಮನೆ ಮುಂದೆ ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಅಭಿಮಾನಿಗಳನ್ನು ಭೇಟಿ ಮಾಡಿದ ಯಶ್​, ಅವರ ಜತೆಗೆ ಫೋಟೋ ತೆಗೆಸಿಕೊಂಡು ಕಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಯಶ್​, ತಮ್ಮ ಹೊಸ ಚಿತ್ರವನ್ನು ಸದ್ಯದಲ್ಲೇ ಘೋಷಿಸುವುದಾಗಿಯೂ ತಿಳಿಸಿದ್ದಾರೆ. ಯಶ್​ ಅಭಿನಯದ ಮುಂದಿನ ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಿಸುತ್ತಿದೆ ಎಂದು ಹೇಳಲಾಗಿದ್ದು, ತಮಿಳಿನ ಜನಪ್ರಿಯ ನಿರ್ದೇಶಕರೊವ್ಬರು ನಿರ್ದೇಶನ ಮಾಡುತ್ತಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net