ಮಹೇಶ್​ ಬಾಬು ಹೊಸ ಚಿತ್ರದ ಓಟಿಟಿ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿದೆಯಂತೆ ಗೊತ್ತಾ?

Mahesh Babu
Published on

ಹೈದರಾಬಾದ್​: 'ಸರ್ಕಾರಿ ವಾರು ಪಾಟ' ನಂತರ ಮಹೇಶ್​ ಬಾಬು ಇದೀಗ ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ನಾಯಕಿಯರಾಗ ನಟಿಸುತ್ತಿರುವ ಈ ಚಿತ್ರಕ್ಕೆ ಚಿತ್ರೀಕರಣ ಪ್ರಗತಿಯಲ್ಲಿದೆ.

ಈ ಮಧ್ಯೆ, ಆಂಧ್ರದಿಂದ ಚಿತ್ರದ ಕುರಿತಾಗಿ ಒಂದು ಭರ್ಜರಿ ಸುದ್ದಿ ಬಂದಿದೆ. ಅದು ಚಿತ್ರದ ಓಟಿಟಿ ಹಕ್ಕುಗಳಿಗೆ ಸಂಬಂಧಿಸಿದ್ದು. ಚಿತ್ರದ ಡಿಜಿಟಲ್​ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ದೊಡ್ಡ ಮೊತ್ತ ಕೊಟ್ಟು ಕೊಂಡಿದೆಯಂತೆ. ಇದೇ ಮೊದಲ ಬಾರಿಗೆ ಮಹೇಶ್​ ಬಾಬು ಅಭಿನಯದ ಚಿತ್ರವೊಂದಕ್ಕೆ ಈ ಮೊತ್ತ ಸಿಗುತ್ತಿದೆ ಎನ್ನುವುದು ವಿಶೇಷ.

ಎಲ್ಲ ಸರಿ, ಎಷ್ಟಕ್ಕೆ ಮಾರಾಟವಾಗಿರಬಹುದು ಎಂಬ ಪ್ರಶ್ನೆ ಬರಬಹುದು? ಮೂಲಗಳ ಪ್ರಕಾರ, ಚಿತ್ರದ ಡಿಜಿಟಲ್​ ಹಕ್ಕುಗಳಿಗೆ ನೆಟ್​ಫ್ಲಿಕ್ಸ್​ ಇಂಡಿಯಾ 80 ಕೋಟಿ ರೂ. ಕೊಟ್ಟಿದೆಯಂತೆ. ಅದೂ ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಅವತರಣಿಕೆಗಳಿಗೆ. ಹಿಂದಿ ಚಿತ್ರದ ಹಕ್ಕುಗಳನ್ನು ನಿರ್ಮಾಪಕರು ಅವರೇ ಇಟ್ಟುಕೊಂಡಿದ್ದು, ಮುಂದಿನ ದಿನಗಳಲ್ಲಿ ಕೊಡುವ ಸಾಧ್ಯತೆ ಇದೆ.

ಬರೀ ಓಟಿಟಿಯೊಂದರಿಂದಲೇ ಅಲ್ಲ, ಬೇರೆಬೇರೆ ಮೂಲಗಳಿಂದಲೂ ಚಿತ್ರಕ್ಕೆ ಚೆನ್ನಾಗಿ ದುಡ್ಡು ಹರಿದು ಬರುತ್ತಿದೆ. ನಿಜಾಮ್​ ಪ್ರದೇಶದ ವಿತರಣೆ ಹಕ್ಕುಗಳನ್ನು ದಿಲ್​ ರಾಜು 50 ಕೋಟಿ ರೂ.ಗಳಿಗೆ ಪಡೆದಿದ್ದಾರಂತೆ. ಅಲ್ಲಿಗೆ ಚಿತ್ರದ ಬಜೆಟ್​ ಹಣ ಚಿತ್ರೀಕರಣ ಮುಗಿಯುವುದಕ್ಕೆ ಮೊದಲೇ ನಿರ್ಮಾಪಕರ ಕೈಗೆ ಬಂದಿದೆ ಎಂದು ಹೇಳಲಾಗುತ್ತಿದೆ, ಒಟ್ಟಾರೆ ಚಿತ್ರ ಅದೆಷ್ಟು ಬಿಜಿನೆಸ್​ ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net