ಜೋಗಪ್ಪನಾದ ಅಂಜನ್​ ನಾಗೇಂದ್ರ; 'ಕಂಬ್ಳಿಹುಳ' ನಾಯಕನ ಹೊಸ ಚಿತ್ರಕ್ಕೆ ಟೈಟಲ್​ ಸಿಕ್ತು!

Ello Jogappa Ninnaramane 2 - Final
Published on

ಬೆಂಗಳೂರು: ಕಳೆದ ವರ್ಷ ಸೈಲೆಂಟ್​ ಹಿಟ್​ ಚಿತ್ರಗಳ ಪೈಕಿ ಅಂಜನ್​ ನಾಗೇಂದ್ರ ಅಭಿನಯದ 'ಕಂಬ್ಳಿಹುಳ' ಚಿತ್ರವೂ ಒಂದು. ಈ ಚಿತ್ರವು ಬಿಡುಗಡೆಯಾದ ಮೇಲೆ ಜನರ ಗಮನಸೆಳೆದಿದ್ದಷ್ಟೇ ಅಲ್ಲ, ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು. ಈ ಚಿತ್ರದ ನಂತರ ಕಿರುತೆರೆ ನಿರ್ದೇಶಕ ಹಯವದನ ನಿರ್ದೇಶನದ ಹೊಸ ಚಿತ್ರದಲ್ಲಿ ಅಂಜನ್​ ನಾಗೇಂದ್ರ ನಟಿಸುತ್ತಾರೆ ಎಂಬ ಸುದ್ದಿ ಇತ್ತು.

ಆ ಸುದ್ದಿ ಈಗ ಕಾರ್ಯರೂಪಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಫಸ್ಟ್​ ಲುಕ್​ ಮತ್ತು ಟೈಟಲ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? 'ಎಲ್ಲೋ ಜೋಗಪ್ಪ ನಿನ್ನರಮನೆ' ಎಂದು ಹೆಸರಿಡಲಾಗಿದೆ.

‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿದು, ಈಗಾಗಲೇ ಚಿತ್ರೀಕರಣ ಸಹ ಶುರುವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್​ ಸುತ್ತ ಈ ಚಿತ್ರ ಸಾಗುತ್ತದಂತೆ. ಅಪ್ಪನ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಚಿತ್ರದಲ್ಲಿದೆಯಂತೆ. ಅದರ ಜತೆಗೆ ಪ್ರೀತಿ, ಕಾಮಿಡಿ ಸಹ ಚಿತ್ರದಲ್ಲಿದೆ.

ಈ ಚಿತ್ರದಲ್ಲಿ ಅಂಜನ್​ ಜತೆಗೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು, ಬಿರಾದರ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್​ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರಕ್ಕೆ ಶಿವಪ್ರಸಾದ್​ ಅವರ ಸಂಗೀತ ಮತ್ತು ನಟರಾಜ್​ ಮದ್ದಾಲ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net