ತನ್ನ ನೆಚ್ಚಿನ ನಟನ ಕಾಣಲು 1000 ಕಿ.ಮೀ ಸೈಕಲ್​ ತುಳಿದ ಅಭಿಮಾನಿ!

Untitled design (75)
Published on

ಮುಂಬೈ: ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ನ ಹ್ಯಾಂಡ್​ಸಮ್​ ನಟ ಕಾರ್ತಿಕ್ ಆರ್ಯನ್, ಇತ್ತೀಚಿಗೆ ಬಿಡುಗಡೆಗೊಂಡ ತಮ್ಮ ಸಿನಿಮಾಗಳ ಮುಖೇನ ಮತ್ತಷ್ಟು ಫ್ಯಾನ್ಸ್​ಗಳನ್ನು ಸಂಪಾದಿಸಿದ್ದು, ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುವ ಮುಖೇನ ಅಭಿಮಾನಿಗಳ ಅಗಾಧ ಪ್ರೀತಿಗೆ ಪಾತ್ರರಾಗುತ್ತಾರೆ.

ದೇಶದ ಹಲವಾರು ಭಾಗದಲ್ಲಿ ಕಾರ್ತಿಕ್​ಗೆ ಫ್ಯಾನ್ಸ್​ಗಳಿದ್ದಾರೆ. ಈ ಪೈಕಿ ಉತ್ತರ ಪ್ರದೇಶದ ನಿಷ್ಠಾವಂತ ಅಭಿಮಾನಿಯೊಬ್ಬರು ಮುಂಬೈನಲ್ಲಿರುವ ಆರ್ಯನ್​ ಅವರ ನಿವಾಸಕ್ಕೆ ಸೈಕಲ್ ತುಳಿದುಕೊಂಡು ಬಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಲು ಒಂಬತ್ತು ದಿನಗಳನ್ನು ಮೀಸಲಿಟ್ಟು, 1000 ಕಿಲೋಮೀಟರ್ ಪ್ರಯಾಣವನ್ನು ಪೂರೈಸಿ, ಭಾನುವಾರ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ತಮ್ಮ ನಿವಾಸದ ಮುಂದೆ ಕಾಯುತ್ತಿದ್ದ ನಿಷ್ಠಾವಂತ ಅಭಿಮಾನಿಯನ್ನು ಬಗ್ಗೆ ಮಾಹಿತಿ ತಿಳಿದ ಕಾರ್ತಿಕ್, ತಕ್ಷಣವೇ ಮನೆಯಿಂದ ಹೊರಬಂದು ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು. ತದನಂತರ ಪ್ರೀತಿಯಿಂದ ಅಭಿಮಾನಿಯೊಂದಿಗೆ ಕೆಲ ಸಮಯ ಮಾತನಾಡಿ, ಒಂದು ಫೋಟೋ ಕೊಟ್ಟಿದ್ದಾರೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ನಟನ ಸ್ಪಂದನೆ, ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂಬರುವ ಚಿತ್ರಗಳಿಗೆ ಒಳಿತಾಗಲಿ ಎಂದು ಶುಭಹಾರೈಸಿದ್ದಾರೆ.

ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಜತೆಯಲ್ಲಿ ಕಾರ್ತಿಕ್ ಕಡೆಯದಾಗಿ ಕಾಣಿಸಿಕೊಂಡರು. ಈ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಅಷ್ಟು ಸದ್ದು ಮಾಡದೆ, ನೀರಸ ಪ್ರತಿಕ್ರಿಯೆಯನ್ನು ಎದುರಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net