More

  ಬಿಯರ್ ಬೆಲೆ ಹೆಚ್ಚಿಸಿದ್ದ ಸರಕಾರಕ್ಕೇ ಶಾಕ್‌ ಕೊಟ್ಟ ಮದ್ಯಪ್ರಿಯರು!

  ಬೆಂಗಳೂರು: ಸರ್ಕಾರ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್‌ ದರ ಫೆಬ್ರವರಿ 1 ರಿಂದ ಪ್ರತಿ ಬಾಟಲ್‌ಗೆ 5 ರೂಪಾಯಿಗಳಿಂದ 12 ರೂಪಾಯಿವರೆಗೂ ಹೆಚ್ಚಳವಾಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಬಿಯರ್ ಬೆಲೆ ಏರಿಕೆಯಾಗಿದ್ದರಿಂದ ಮದ್ಯಪ್ರಿಯರು ಬಿಯರ್‌ ಖರೀದಿಗೆ ಹಿಂದೇಟು ಹಾಕಿದ್ದರಿಂದ ರಾಜ್ಯಾದ್ಯಂತ ಫೆ.1ರಿಂದಲೂ ಬಿಯರ್‌ ಮಾರಾಟ ಕುಸಿಯುತ್ತಲೇ ಸಾಗಿದೆ ಎನ್ನಲಾಗಿದೆ.

  ರಾಜ್ಯದಲ್ಲಿ ಕಳೆದ ವರ್ಷ ಫೆಬ್ರವರಿ 1 ರಿಂದ 7 ರವರೆಗೆ ಏಳು ದಿನಗಳಲ್ಲಿ 7.26 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 6.46 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದೆ. ಬಿಯರ್‌ ಮಾರಾಟ ಕುಸಿದಿರುವ ಕಾರಣ, ರಾಜ್ಯ ಪಾನೀಯ ನಿಗಮಕ್ಕೆ ಬಿಯರ್‌ಗಾಗಿ ಸಲ್ಲಿಸುವ ಖರೀದಿ ಬೇಡಿಕೆ ಕೂಡ ಇಳಿಕೆಯಾಗಿದೆ. ಆದರೆ ದೇಸಿ ಮದ್ಯದ ವಹಿವಾಟಿನಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ.

  ಒಟ್ಟಾರೆ ಬಿಯರ್‌ ಮಾರಾಟ ಕುಸಿತಕ್ಕೆ ತೆರಿಗೆ ಹೆಚ್ಚಳವೇ ಪ್ರಮುಖ ಕಾರಣ. ಆದರೆ ಮಾರಾಟ ಕುಸಿತ ಕಂಡಿದ್ದರೂ ಸರಕಾರದ ಬೊಕ್ಕಸಕ್ಕೆ ನಷ್ಟವಿಲ್ಲ. ತೆರಿಗೆ ಹೆಚ್ಚಳ ಮಾಡಿರುವುದರಿಂದ ನಿರೀಕ್ಷೆಯಂತೆಯೇ ಆದಾಯ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಕಡಿಮೆ ಬೆಲೆಯ ಬಿಯರ್‌ ಬ್ರ್ಯಾಂಡ್‌ ಖರೀದಿ ಮಾಡುತ್ತಿದ್ದು, ಕಡಿಮೆ ಬೆಲೆಯ ಬಿಯರ್‌ಗೆ ಡಿಮಾಂಡ್ ಜಾಸ್ತಿಯಾಗಿದೆ.

  ಕಾಂಗ್ರೆಸ್‌ ಸರಕಾರ ಬಂದ ನಂತರ ಮೂರು ಬಾರಿ ಬಿಯರ್‌ ದರ ಹೆಚ್ಚಳವಾಗಿದೆ. ಇತ್ತ ಕಡೆ ಬಿಯರ್‌ ಉತ್ಪಾದನಾ ಕಂಪನಿಗಳು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ದರ ಹೆಚ್ಚಿಸಿದ್ದವು. ಇದೀಗ ಮತ್ತೆ ಬಿಯರ್‌ ದರ ಹೆಚ್ಚಳವಾಗಿದ್ದು, ಆರೇಳು ತಿಂಗಳ ಅವಧಿಯಲ್ಲಿ ಬಿಯರ್‌ ಬೆಲೆ ಪ್ರತಿ ಬಾಟಲ್‌ಗೆ ಸುಮಾರು 40 ರೂ.ವರೆಗೆ ಹೆಚ್ಚಳವಾದಂತಾಗಿದೆ.   

  ಸೌದಿ ಅರೇಬಿಯಾ ಏಕೆ, ಯಾವಾಗ ಮದ್ಯವನ್ನು ನಿಷೇಧಿಸಿದೆ?

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts