More

    ಬಸ್ಸು-ಕಾರು ಓಕೆ, ರೈಲನ್ನೇ ತಳ್ಳುವುದನ್ನು ಎಂದಾದರೂ ನೋಡಿದ್ದೀರಾ? ಯುಪಿಯಲ್ಲಿ ಕಂಡುಬಂದ ವಿಶಿಷ್ಟ ದೃಶ್ಯವಿದು..ವೈರಲ್ ಆಯ್ತು ವಿಡಿಯೋ 

    ಉತ್ತರಪ್ರದೇಶ: ಭಾರತೀಯ ರೈಲ್ವೆಯ ಮಾನಹಾನಿ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ರೈಲ್ವೆ ನೌಕರರು ರೈಲು ಬೋಗಿ ತಳ್ಳುತ್ತಿರುವುದನ್ನು ಕಾಣಬಹುದು. ಈ ರೈಲು ಬೋಗಿ ಅಧಿಕಾರಿಗಳಿಗೆ ಸೇರಿದ್ದು, ಅಂದರೆ ಇದರಲ್ಲಿ ಅವರು ತಪಾಸಣೆಗೆ ಹೋಗುತ್ತಾರೆ. ಆದರಿಲ್ಲಿ ತಪಾಸಣಾ ವಾಹನವೇ ಕೆಟ್ಟು ನಿಂತಿದೆ ಎಂದು ಹೇಳಲಾಗುತ್ತಿದೆ.   

    ರೈಲನ್ನು ತಳ್ಳುತ್ತಿರುವ ವಿಡಿಯೋ ವೈರಲ್

    ಈ ವಿಡಿಯೋ ಉತ್ತರ ಪ್ರದೇಶದ ಅಮೇಥಿಯಲ್ಲಿದ್ದು, ಹಳಿಗಳ ಮೇಲೆ ಕೆಟ್ಟು ನಿಂತಿದ್ದ ರೈಲನ್ನು ಜನರು ತಳ್ಳುತ್ತಿರುವುದು ಕಂಡುಬಂದಿದೆ. ರೈಲ್ವೆ ಅಧಿಕಾರಿಗಳಿಗಾಗಿ ನಿರ್ಮಿಸಲಾದ ಡಿಪಿಸಿ ರೈಲು ಹಳಿಗಳ ಮಧ್ಯದಲ್ಲಿ ನಿಂತಿತು. ನಂತರ ನೌಕರರು ಅದನ್ನು ತಳ್ಳುತ್ತಿರುವುದು ಕಂಡುಬಂದಿದೆ.   

    ನಿದು ವಿಷಯ?

    ಡಿಪಿಸಿ ರೈಲಿನಲ್ಲಿ ದೋಷ ಸಂಭವಿಸಿದಾಗ ಅದು ಮುಖ್ಯ ಮಾರ್ಗದಲ್ಲಿ ನಿಂತಿದೆ ಎಂದು ಹೇಳಲಾಗಿದೆ. ನಂತರ ರೈಲ್ವೇ ನೌಕರರು ರೈಲನ್ನು ಮುಖ್ಯ ಮಾರ್ಗದಿಂದ ಲೂಪ್ ಲೈನ್‌ಗೆ ತಳ್ಳಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದೆ.

    ಇಡೀ ಘಟನೆ ಅಮೇಥಿಯ ನಿಹಾಲ್‌ಗಢ್ ರೈಲು ನಿಲ್ದಾಣದಲ್ಲಿ ಕಂಡುಬಂದದ್ದು ಎನ್ನಲಾಗಿದೆ. ಅಧಿಕಾರಿಗಳು ಸುಲ್ತಾನ್‌ಪುರ ಕಡೆಯಿಂದ ಡಿಪಿಸಿ ರೈಲಿನಲ್ಲಿ ಲಕ್ನೋ ಕಡೆಗೆ ಹೋಗುತ್ತಿದ್ದರು. ರೈಲು ನಿಲ್ದಾಣದಿಂದ ಹೊರಗೆ ನಿಂತಿತು. ಈ ರೈಲನ್ನು ಮುಖ್ಯ ಮಾರ್ಗದಲ್ಲಿ ನಿಲುಗಡೆ ಮಾಡಿದ್ದರಿಂದ ಇತರೆ ರೈಲುಗಳಿಗೆ ತೊಂದರೆಯಾಗದಂತೆ ಲೂಪ್ ಲೈನ್ ನಲ್ಲಿ ತಳ್ಳಿ ನಿಲ್ಲಿಸಲಾಗಿದೆ.   

    ಕೆಲವರು ರೈಲನ್ನು ರೈಲ್ವೇ ಗೇಟ್‌ನಿಂದ ತಳ್ಳಿ ತೆಗೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದೀಗ ಈ ರೈಲನ್ನು ದುರಸ್ತಿಗಾಗಿ ಮುಂದಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ. ಇದರ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿದ್ದು, ಇದೀಗ ವೈರಲ್ ಆಗಿದೆ.

    ‘ಸತ್ಯ ಯಾವಾಗಲೂ ಗೆಲ್ಲುತ್ತದೆ, ವೆಲ್ ಕಮ್ ಟು ತಿಹಾರ್ ಜೈಲ್’: ಮತ್ತೆ ಕೇಜ್ರಿವಾಲ್ ಮೇಲೆ ಕಿಡಿಕಾರಿದ ಸುಕೇಶ್  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts