More

    ದುಂದುವೆಚ್ಚ ಕಡಿವಾಣಕ್ಕೆ ಸಾಮೂಹಿಕ ವಿವಾಹ ಕಾರ್ಯ ಸಹಕಾರಿ

    ಇಂಡಿ: ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳ ಅರ್ಥಿಕ ಸಂಕಷ್ಟ ತಪ್ಪಿಸಲು ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ ಎಂದು ಲಚ್ಯಾಣದ ಸಿದ್ಧಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿ ಡಾ.ವೃಷಭಲಿಂಗೇಶ್ವರ ಶ್ರೀಗಳು ಹೇಳಿದರು.

    ತಾಲೂಕಿನ ಲಚ್ಯಾಣದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆ ನಿಮಿತ್ತ ಶನಿವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವರನಿಗೆ ಬಟ್ಟೆ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ಹೂವಿನಹಾರ ಊಟ ಸೇರಿ ಮದುವೆಯ ಎಲ್ಲ ಖರ್ಚನ್ನು ಶ್ರೀಮಠದಿಂದಲೇ ಪ್ರತಿ ವರ್ಷ ಮಾಡುತ್ತೇವೆ. ವರದಕ್ಷಣೆ ಮತ್ತು ದುಂದುವೆಚ್ಚ ಕಡಿವಾಣ ಹಾಕಲು ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗುತ್ತಿದೆ. ಸಂಸಾರದಲ್ಲಿ ಸತಿ-ಪತಿ ಒಂದಾಗಿ ಬಾಳಬೇಕು. ಯಾವುದಕ್ಕೂ ಸಂಶಯ ಬೇಡ, ತಮ್ಮ ಜೀವನ ಅಮೂಲ್ಯ ಮಾಡಿಕೊಂಡು ಸಂಸಾರ ಸುಖಮಯ ಸಾಗಿಸಿ ಎಂದರು.

    ಹೂವಿನಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು, ತುಂಗಳದ ಮಾತೋಶ್ರೀ ಅನಸೂಯಾದೇವಿ ಅಮ್ಮನವರು ಮಾತನಾಡಿದರು. ರೈತ ಮುಖಂಡ ಬಸವಂತರಾಯಗೌಡ ಪಾಟೀಲ, ಇಂಡಿ ಸಿಡಿಪಿಒ ಕಚೇರಿಯ ಸಿ.ಜೆ. ತೋರವಿ, ಗ್ರಾ.ಪಂ ಅಧ್ಯಕ್ಷ ಯಶವಂತ ಬಿರಾದಾರ, ಪಡನೂರದ ಕಲ್ಲನಗೌಡ ಬಿರಾದಾರ ಪಾಲ್ಗೊಂಡಿದ್ದರು.

    ಅರಣ್ಯ ಇಲಾಖೆಯ ಧನರಾಜ ಮುಜಗೊಂಡ, ನಿವೃತ್ತ ಶಿಕ್ಷಕ ಮಹಾದೇವ ಮುಜಗೊಂಡ, ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ ಮಾತನಾಡಿದರು. 32 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದವು.

    ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ 3 ಗಂಟೆಯಿಂದ 6 ಗಂಟೆಯವರೆಗೆ ಭಕ್ತರು ಹರಕೆ ತೀರಿಸಿದರು. ಬೆಳಗ್ಗೆ 8 ಗಂಟೆಗೆ ಷಟಸ್ಥಲ ಧ್ವಜಾರೋಹಣ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts