More

    ಮನಸ್ಸು-ಜೀವನ ಜೋಡಿಸುವ ವಿವಾಹ

    ಕಳಸ: ಮನಸ್ಸು, ಜೀವನ ಜೋಡಿಸುವ ಕೆಲಸವನ್ನು ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ಹೊರನಾಡಿನ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಹೇಳಿದರು.

    ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಲಲಿತಕಲಾ ಮಂಟಪದಲ್ಲಿ ಶ್ರೀಕ್ಷೇತ್ರದಿಂದ ಭಾನುವಾರ ಹಮ್ಮಿಕೊಂಡಿದ್ದ 31ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಮಾತನಾಡಿ, ಮದುವೆಗೆಂದು ಖರ್ಚು ಮಾಡುವ ಹಣವನ್ನು ವಧುವರರ ಹೆಸರಿನಲ್ಲಿ ಠೇವಣಿಯಾಗಿಟ್ಟು ನಂತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗ ಮಾಡಬೇಕು. ದುಂದುವೆಚ್ಚ ಮಾಡದೆ ಸರಳ ಆರತಕ್ಷತೆ ನಡೆಸುವಂತೆ ತಿಳಿಸಿದರು.
    ದಂಪತಿಗಳಿಗೆ ಹೊಂದಾಣಿಕೆಯೇ ಜೀವನದ ಸೂತ್ರವಾಗಬೇಕು. ಸೊಸೆಯನ್ನು ಮಗಳಾಗಿ ಸ್ವೀಕಾರ ಮಾಡಿ. ವಧುವರರು ಅರಿತು ಬಾಳಿ, ಮನೆಯ ಹಿರಿಯರನ್ನು ಗೌರವದಿಂದ ಕಾಣಿರಿ, ಕಿರಿಯರನ್ನು ಪ್ರೀತಿಯಿಂದ ಕಾಣಬೇಕು. ಹೆಣ್ಣು ಮನೆ ಬೆಳಗುವ ಮತ್ತು ಮನೆಯ ಶಕ್ತಿ ಎಂಬ ನಂಬಿಕೆ ಇದೆ. ಅದನ್ನು ವರ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
    ರವೀಂದ್ರ ಭಟ್ ಪೌರೋಹಿತ್ಯದಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ಕಲಶೇಶ್ವರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಭಟ್, ಕ್ಷೇತ್ರದ ಟ್ರಸ್ಟಿಗಳಾದ ರಾಜಲಕ್ಷ್ಮೀ ಬಿ. ಜೋಷಿ, ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾ ಶಂಕರ್ ಜೋಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts