More

    ಟೆರೆಷಿಯನ್‌ಗೆ ‘ಟೀಂ ಚಾಂಪಿಯನ್’ ಪಟ್ಟ: ಮೈಸೂರು ವಿವಿ ಅಂತರ ಕಾಲೇಜು, ವಲಯ ಮಹಿಳೆಯರ ಕ್ರೀಡಾಕೂಟ

    ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಂತರ ವಲಯ ಮಹಿಳೆಯರ ವಿವಿಧ ಗುಂಪು ಸ್ಪರ್ಧೆಗಳ ಕ್ರೀಡಾಕೂಟದಲ್ಲಿ ನಗರದ ಟೆರೆಷಿಯನ್ ಕಾಲೇಜು ತಂಡ ‘ಟೀಂ ಚಾಂಪಿಯನ್’ ಪಟ್ಟ ತನ್ನದಾಗಿಸಿಕೊಂಡಿತು.

    ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಒಟ್ಟು 27 ಅಂಕಗಳೊಂದಿಗೆ ‘ತಂಡ ಸಮಗ್ರ’ ಪ್ರಶಸ್ತಿ ಪಡೆಯಿತು. 18 ಅಂಕಗಳೊಂದಿಗೆ ಪಿ.ಜಿ.ಎಸ್.ಸಿ. ಮಾನಸಗಂಗೋತ್ರಿ ತಂಡ ದ್ವಿತೀಯ ಹಾಗೂ 11 ಅಂಕಗಳಿಸಿದ ಸೆಪಿಯೇಂಟ್ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು.

    ಮೈಸೂರು ವಿವಿಯ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಬಹುಮಾನ ವಿತರಣಾ ಸಮಾರಂಭ ನೆರವೇರಿತು. ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಪ್ನಾ, ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಸಿ.ವೆಂಕಟೇಶ್, ಉಪನಿರ್ದೇಶಕ ಡಾ.ಪಿ.ಕೃಷ್ಣಯ್ಯ ಇತರರಿದ್ದರು. ಕ್ರೀಡಾಕೂಟದಲ್ಲಿ 32 ಕಾಲೇಜುಗಳಿಂದ 400 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.

    ಫಲಿತಾಂಶ: ಬ್ಯಾಡ್ಮಿಂಟನ್‌ನಲ್ಲಿ ಸೆಪಿಯಂಟ್ ಕಾಲೇಜು, ಮೈಸೂರು (ಪ್ರಥಮ), ಬನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ), ಡಿ.ಪೌಲ್ ಪ್ರ.ದ.ಕಾಲೇಜು (ತೃತೀಯ), ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪಿ.ಜಿ.ಎಸ್.ಸಿ.(ಪ್ರ), ಹಾಸನದ ಸರ್ಕಾರಿ ಪ್ರ.ದ. ಕಾಲೇಜು(ದ್ವಿ.), ಚಾಮರಾಜನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು(ತೃ), ಬಾಸ್ಕೆಟ್‌ಬಾಲ್‌ನಲ್ಲಿ ಮೈಸೂರಿನ ಟೆರೆಷಿಯನ್ ಕಾಲೇಜು (ಪ್ರ), ಸೆ.ಜೋಸೆಫ್ ಪ್ರ.ದ.ಕಾಲೇಜು(ದ್ವಿ), ಪಿ.ಜಿ.ಎಸ್.ಸಿ. (ತೃ), ಚೆಸ್‌ನಲ್ಲಿ ಮೈಸೂರಿನ ಎಂ.ಎಂ.ಕೆ.-ಎಸ್.ಡಿ.ಎಂ ಕಾಲೇಜು (ಪ್ರ), ಟೆರೆಷಿಯನ್(ದ್ವಿ) ಜೆ.ಎಸ್.ಎಸ್. ಮಹಿಳಾ ಕಾಲೇಜು, ಸರಸ್ವತಿಪುರಂ(ತೃ) ಹ್ಯಾಂಡ್‌ಬಾಲ್‌ನಲ್ಲಿ ಟೆರೆಷಿಯನ್(ಪ್ರ), ಪಿ.ಜಿ.ಎಸ್.ಸಿ.(ದ್ವಿ). ಹಾಕಿಯಲ್ಲಿ ಟೆರೆಷಿಯನ್ (ಪ್ರ), ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ದ್ವಿ), ಸೆಂಟ್ ಜೋಸೆಫ್ (ತೃ), ಕಬಡ್ಡಿಯಲ್ಲಿ ವಿದ್ಯಾವಿಕಾಸ ಪ್ರ.ದ. ಕಾಲೇಜು, ಮೈಸೂರು(ಪ್ರ), ಹಾಸನದ ಸರ್ಕಾರಿ ಪ್ರ.ದ. ಕಾಲೇಜು (ದ್ವಿ), ಟೆರೆಷಿಯನ್(ತೃ), ಖೋಖೋನಲ್ಲಿ ತಿ.ನರಸೀಪುರದ ಪಿ.ಆರ್.ಎಂ. ವಿಜಯ ಕಾಲೇಜು (ಪ್ರ), ಪಿ.ಜಿ.ಎಸ್.ಸಿ.(ದ್ವಿ), ಮಹಾರಾಣಿ ಕಲಾ ಕಾಲೇಜು(ತೃ), ಸಾಫ್ಟ್‌ಬಾಲ್‌ನಲ್ಲಿ ಎಸ್.ಬಿ.ಆರ್.ಆರ್.ಮಹಾಜನ (ಪ್ರ), ಟೆರೆಷಿಯನ್ (ದ್ವಿ), ಪಿ.ಜಿ.ಎಸ್.ಸಿ.(ತೃ), ಟೇಬಲ್ ಟೆನಿಸ್‌ನಲ್ಲಿ ಸೆಪಿಯಂಟ್(ಪ್ರ), ಹಾಸನದ ಸೇಂಟ್ ಜೋಸೆಫ್ ಪ್ರ.ದ. ಕಾಲೇಜು(ದ್ವಿ), ಮಂಡ್ಯದ ಸರ್ಕಾರಿ ಮಹಿಳಾ ಪ್ರ.ದ. ಕಾಲೇಜು (ತೃ), ಟೆನಿಸ್‌ನಲ್ಲಿ ಪಿ.ಜಿ.ಎಸ್.ಸಿ.(ಪ್ರ), ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು (ದ್ವಿ), ಸೆಪಿಯಂಟ್(ತೃ), ಹುಣಸೂರಿನ ಥ್ರೋಬಾಲ್‌ನಲ್ಲಿ ಹುಣಸೂರಿನ ಸೇಂಟ್ ಜೋಸೆಫ್ ಪ್ರ.ದ. ಕಾಲೇಜು(ಪ್ರ) ಗುಂಡ್ಲುಪೇಟೆಯ ಸರ್ಕಾರಿ ಪ್ರ.ದ. ಕಾಲೇಜು, ಗುಂಡ್ಲುಪೇಟೆ (ದ್ವಿ), ಎಸ್.ಬಿ.ಆರ್.ಆರ್. ಮಹಾಜನ ಕಾಲೇಜು(ತೃ), ವಾಲಿಬಾಲ್‌ನಲ್ಲಿ ಟೆರೆಷಿಯನ್ (ಪ್ರ), ಎಚ್.ಡಿ.ಕೋಟೆಯ ಎಸ್.ಎ.ಸಿ.ಪ್ರ.ದ. ಕಾಲೇಜು (ದ್ವಿ), ಹುಣಸೂರಿನ ಸೇಂಟ್ ಜೋಸೆಫ್ ಪ್ರ.ದ. ಕಾಲೇಜು(ತೃ), ಟೆನಿಕಾಟ್‌ನಲ್ಲಿ ವಿಜಯನಗರದ ಸರ್ಕಾರಿ ಮಹಿಳಾ ಪ್ರ.ದ.ಕಾಲೇಜು (ಪ್ರ), ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು(ದ್ವಿ), ತಿ.ನರಸೀಪುರದ ಸರ್ಕಾರಿ ಪ್ರ.ದ.ಕಾಲೇಜು(ತೃ) ಬಹುಮಾನ ಪಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts