More

    ಅನ್ಯೋನ್ಯದಿಂದ ಬದುಕು ಸಾಗಿಸಿ

    ಸಿಂಧನೂರು: ಸಾಮೂಹಿಕ ವಿವಾಹ ಬಡವರಿಗೆ ವರದಾನವಾಗಿದೆ ಎಂದು ಅರ್ಚಕ ವೇದಮೂರ್ತಿ ಕರಿಬಸಯ್ಯಸ್ವಾಮಿ ಹಿರೇಮಠ ಹೇಳಿದರು.
    ಗದ್ರಟಗಿಯಲ್ಲಿ ಶ್ರೀ ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಬುಧವಾರ ಮಾತನಾಡಿದರು.

    ದುಂದುವೆಚ್ಚದ ಮದುವೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲಿದೆ. ಸಾಮೂಹಿಕ ವಿವಾಹಗಳಿಂದ ಬದುಕು ಹಸನವಾಗಲಿದೆ. ನೂತನ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು ಅನ್ಯೋನ್ಯದಿಂದ ಸಮಬಾಳು-ಸಮಪಾಲು ಎನ್ನುವಂತೆ ಜೀವನ ನಡೆಸಬೇಕೆಂದರು.

    ಶರಣಯ್ಯಸ್ವಾಮಿ, ಶಾಂತಯ್ಯಸ್ವಾಮಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು. ಉದ್ಯಮಿಗಳಾದ ಮಲ್ಲನಗೌಡ ಕಾನಿಹಾಳ, ವೀರಭದ್ರಗೌಡ ಕಾನಿಹಾಳ, ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಮರೇಗೌಡ ಕಾನಿಹಾಳ, ಪ್ರಮುಖರಾದ ಚನ್ನನಗೌಡ ಪೊಪಾ., ಹನುಮಂತಪ್ಪ ನಾಯಕ, ಬಸವರಾಜ, ನಂಜಲದಿನ್ನಿ ರಾಜಪ್ಪ, ಅಮರೇಶ ಕೆಸರಟ್ಟಿ, ವೀರೇಶ ಕೆಸರಟ್ಟಿ ಇದ್ದರು.

    ಜಾತ್ರೆ ನಿಮಿತ್ತ ಬೆಳಗ್ಗೆ ಶ್ರೀ ಚೌಡೇಶ್ವರಿ ದೇವಿಗೆ ಉಡಿ ತುಂಬಲಾಯಿತು. ನಂತರ ಧ್ವಜಾರೋಹಣ ನೆರವೇರಿಸಲಾಯಿತು. ಕಳಸಾರೋಹಣ ಹಾಗೂ ಉಚ್ಛಾಯ ಸೇವೆ ನಡೆಯಿತು. ಮಧ್ಯಾಹ್ನ ಪಲ್ಲಕ್ಕಿ ಉತ್ಸವ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts