More

    ಸಾಮೂಹಿಕ ವಿವಾಹದಲ್ಲಿ ಮತದಾನ ಜಾಗೃತಿ

    ಕೊಪ್ಪಳ : ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾ.ಪಂ ವ್ಯಾಪ್ತಿಯ ಕನಕಾಪುರ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನೂತನ ವಧು-ವರರಿಗೆ ಗುರುವಾರ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

    ಗ್ರಾಮದ ಬೀರಲಿಂಗೇಶ್ವರ ದೇವರ 17 ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹದಲ್ಲಿ 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಈ ವೇಳೆ ತಾಲೂಕು ಸ್ವೀಪ್ ಸಮಿತಿಯ ಸದಸ್ಯ ಶಿವರಾಜ್ ಪಾಟೀಲ್ ಅವರು ನೂತನ ವಧು-ವರರಿಗೆ ಮತದಾನ ಕುರಿತು ಮಾಹಿತಿಯನ್ನು ನೀಡಿದರು. ಬಳಿಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

    ನಂತರ ಶಿರವಾರ ಗ್ರಾಮದ ಗವಿಸ್ವಾಮಿ ಗ್ಯಾನಪ್ಪಯ್ಯ ತಾತನವರು ಮಾತನಾಡಿ, ಮತದಾನ ಶ್ರೇಷ್ಠವಾದದ್ದು, ಪ್ರತಿಯೊಬ್ಬರೂ ಮತದಾನದಿಂದ ವಂಚಿತರಾಗದೇ ಕಡ್ಡಾಯವಾಗಿ ಮತದಾನ ಮಾಡಲು ತಿಳಿಸಿದರು. ಅಲ್ಲದೇ ಸಾಮೂಹಿಕ ವಿವಾಹದಿಂದ ಕುಟುಂಬದ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದರು.

    ಈ ಸಂದರ್ಭದಲ್ಲಿ ಅರಳಹಳ್ಳಿಯ ಗವಿಸಿದ್ದೇಶ್ವರಯ್ಯ ತಾತಾ, ಶರಣಯ್ಯಸ್ವಾಮಿ ಗುಂಟಮಡವು, ಬಸಾಪಟ್ಟಣದ ಸಿದ್ದಯ್ಯ ಗುರುವಿನ, ಮರಿಯಪ್ಪ ತಾತಾನವರು ಸೇರಿದಂತೆ ಗ್ರಾಮದ ಪ್ರಮುಖರಾದ ಬೀರಪ್ಪ ಜಾಲಿಹಾಳ, ಲಕ್ಮಪ್ಪ ಪೊಲೀಸ್ ಪಾಟೀಲ್, ಶಂಕರಗೌಡ ದಳಪತಿ ಮತ್ತು ಗ್ರಾಮದ ಹಿರಿಯರು ಹಾಗೂ ಗ್ರಾಮದ ಕನಕ ನೌಕರ ಬಂಧುಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts