ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಕೊಂಡೊಯ್ದ ಹೆತ್ತ ತಂದೆ..!

jabalpur
Published on

ಜಬಲ್ಪುರ್: ಮಾನವ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸಾಗಿಸಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ.

ಇದನ್ನೂ ಓದಿ: ಮಣ್ಣಿನಲ್ಲಿ ಹೂತಿದ್ದರೂ ಇನ್ನೂ ಹೊಳೆಯುತ್ತಿದೆ 3 ಸಾವಿರ ವರ್ಷ ಹಳೆ ಖಡ್ಗ!

ಘಟನೆ ಹಿನ್ನೆಲೆ:
ಸುನೀಲ್ ಧುರ್ವೆ ಹಾಗೂ ಜಮಾನಿ ಮಾರಾವಿ ದಂಪತಿಗಳು ದಿಂಡೋರಿ ಜಿಲ್ಲೆಯ ಸಹಜ್ಪುರಿಯಲ್ಲಿ ವಾಸಿಸುತ್ತಿದ್ದು, ಜಮಾನಿಯು ಜೂನ್ 13ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವನ್ನು ನೀಡಿದ್ದಳು. ಮಗು ದುರ್ಬಲ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ, ಜೂ.14 ರಂದು ಜಬಲ್‌ಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರದಂದು ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.

ತದ ನಂತರ ಮಗುವನ್ನು ತಮ್ಮ ಊರಿಗೆ ಕೊಂಡೊಯ್ಯಲು ಸುನೀಲ್​, ಆಸ್ಪತ್ರೆಯ ಸಿಬ್ಬಂದಿಗೆ ಶವ ಸಾಗಿಸುವ ವಾಹನವನ್ನು ನೀಡುವಂತೆ ಕೇಳಿದಾಗ ಆತನ ಮನವಿಯನ್ನು ಅವರು ತಿರಸ್ಕರಿಸಿದ್ದಾರೆ. ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಖಾಸಗಿ ವಾಹನದವರು 4,000 ರಿಂದ 5,000 ರೂ. ಕೇಳಿದ್ದು, ಇಷ್ಟು ಹಣವನ್ನು ಭರಿಸಲು ಆ ಬಡ ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಪ್ರಮಾಣೀಕರಿಸಲು ಮನವಿ: ವಿವಾದದ ಸುಳಿಯಲ್ಲಿ ಆದಿಪುರುಷ್​

ಕೊನೆಗೆ ಬೇರೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತಂದೆಯ ಮಡಿಲಲ್ಲಿ ಮಗುವಿನ ಮೃತದೇಹವನ್ನು ಹಾಕಿಕೊಂಡು ಸುಮಾರು ಐದು ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿ ಕಾಯುವಾಗ ಈ ಸುದ್ದಿಯು ಹೊರ ಬಿದ್ದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net