

ತಮಿಳುನಾಡಿನಲ್ಲಿರುವ ಡಿಫೆನ್ಸ್ ಸವಿರ್ಸ್ ಸ್ಟಾಫ್ ಕಾಲೇಜಿನಲ್ಲಿ (ಡಿಎಸ್ಎಸ್ಸಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯಥಿರ್ಗಳು ಕಡ್ಡಾಯವಾಗಿ ಕರೊನಾ ನಿಯಮಾವಳಿ ಪಾಲಿಸಲು ಸೂಚಿಸಲಾಗಿದೆ. ಹಲವು ಹುದ್ದೆಗೆ ಅಜಿರ್ ಸಲ್ಲಿಸಲುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಒಟ್ಟು ಹುದ್ದೆಗಳು: 83
ಹುದ್ದೆ ವಿವರ
* ಸ್ಟೆನೋಗ್ರಫರ್ ಗ್ರೇಡ್ 2 - 4
* ಲೋವರ್ ಡಿವಿಷನ್ ಕ್ಲರ್ಕ್ (ಎಲ್ಡಿಸಿ) - 10
* ಸಿವಿಲಿಯನ್ ಮೋಟಾರ್ ಡೆವರ್ (ಆಡಿರ್ನರಿ ಗ್ರೇಡ್) - 7
* ಸುಖಾನಿ - 1
* ಕಾರ್ಪೆಂಟರ್ - 1
* ಮಲ್ಟಿ ಟಾಸ್ಕಿಂಗ್ ಸ್ಟಾಫ್ ಆಫೀಸ್ ಆ್ಯಂಡ್ ಟೆನಿಂಗ್ - 60
ವಿದ್ಯಾರ್ಹತೆ: ಸ್ಟೆನೋಗ್ರಫರ್ ಹುದ್ದೆಗೆ ದ್ವೀತಿಯ ಪಿಯುಸಿ ಉತ್ತೀರ್ಣರಾಗಿದ್ದು, 10 ನಿಮಿಷದಲ್ಲಿ 80 ಪದ ಡಿಕ್ಟೇಷನ್ ಹಾಗೂ 50 ನಿಮಿಷದಲ್ಲಿ ಇಂಗ್ಲಿಷ್ ಹಾಗೂ 65 ನಿಮಿಷದಲ್ಲಿ ಹಿಂದಿ ಟ್ರಾನ್ಸ್ಕ್ರಿಷನ್ ಮಾಡಲು ತಿಳಿದಿರಬೇಕು. ಎಲ್ಡಿಸಿ ಹುದ್ದೆಗೆ ದ್ವೀತಿಯ ಪಿಯುಸಿ ಜತೆ ಪ್ರತಿ ನಿಮಿಷಕ್ಕೆ 35 ಪದ ಟೈಪ್ ಮಾಡುವ ವೇಗ ಹೊಂದಿರಬೇಕು. ಡೆವರ್ ಹುದ್ದೆಗೆ ದ್ವೀತಿಯ ಪಿಯು ಜತೆ ಚಾಲನಾ ಪರವಾನಗಿ ಹೊಂದಿರಬೇಕು. ಸುಖಾನಿಗೆ ದ್ವೀತಿಯ ಪಿಯು ಜತೆ ಈಜುವ ಪ್ರಮಾಣಪತ್ರ, ನೌಕಾಯಾನ ಜ್ಞಾನ / ಸಣ್ಣ ದೋಣಿ ಚಲಾಯಿಸಿರುವ 2 ವರ್ಷದ ವೃತ್ತಿ ಅನುಭವ ಅವಶ್ಯ. ಕಾರ್ಪೆಂಟರ್ಗೆ ದ್ವೀತಿಯ ಪಿಯು/ ಕಾರ್ಪೆಂಟರ್ ಆಗಿ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು. ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಪ್ರೌಢಶಿಕ್ಷಣ ಪಡೆದಿರಬೇಕು.
ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ ವಯೋಮಿತಿ 18 ವರ್ಷ ಇದೆ. ಸ್ಟೆನೋಗ್ರಫರ್, ಲೋವರ್ ಡಿವಿಷನ್ ಕ್ಲರ್ಕ್, ಡೆವರ್ ಹುದ್ದೆಗೆ ಗರಿಷ್ಠ ವಯೋಮಿತಿ 27 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 37 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 30, ಎಸ್ಸಿಗೆ 7, ಎಸ್ಟಿಗೆ 3, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 6 ಸ್ಥಾನ ಮೀಸಲಿರಿಸಲಾಗಿದೆ.
ವೇತನ: ಸ್ಟೆನೋಗ್ರರ್ಗೆ ಮಾಸಿಕ 25,500-81,100 ರೂ. ವೇತನ ಇದೆ, ಮಲ್ಟಿ ಟಾಸ್ಕಿಂಗ್ ಸ್ಟಾಫ್‌ಗೆ ಮಾಸಿಕ 18,000 ರೂ.ನಿಂದ 56,900 ರೂ. ವೇತನ ನೀಡಲಾಗುವುದು. ಉಳಿದ ಹುದ್ದೆಗಳಿಗೆ ಮಾಸಿಕ 19,900 ರೂ. ನಿಂದ 63,200 ರೂ. ವೇತನ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ, ಮೀಸಲಾತಿ, ವಯಸ್ಸು ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಲಿಖಿತ ಪರೀಕ್ಷೆ ಆಹ್ವಾನಿಸಲಾಗುವುದು. ನಂತರ ಕೌಶಲ ಪರೀಕ್ಷೆ/ ಫಿಜಿಕಲ್ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ವೆಲ್ಲಿಂಗ್ಟನ್ನಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 22.5.2021
ಅಧಿಸೂಚನೆಗೆ: https://bit.ly/3xzAd6V
ಮಾಹಿತಿಗೆ: http://www.dssc.gov.in