ಸಿಎಂ ಮನೆ ಮುಂದೆ ಅಬಕಾರಿ ಸಚಿವ ನಾಗೇಶ್ ಬೆಂಬಲಿಗರ ಗಲಾಟೆ

protest
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಮನೆ ಮುಂದೆ ಮಂಗಳವಾರ ಸಂಜೆ ಅಬಕಾರಿ ಸಚಿವ ನಾಗೇಶ್​​ರ ಬೆಂಬಲಿಗರು ಗಲಾಟೆ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, 7-8 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಸದ್ಯ ಖಾಲಿ ಇರುವುದು 7 ಖಾತೆ ಮಾತ್ರ. ಹಾಲಿ ಒಬ್ಬ ಸಚಿವರಿಗೆ ಕೋಕ್​ ನೀಡಲಾಗುತ್ತೆ ಎಂಬ ಮಾತೂ ಕೇಳಿಬಂದಿದೆ. ಬಿಎಸ್​ವೈ ಸಂಪುಟದಿಂದ ಔಟ್​ ಆಗೋದು ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರೂ ಆದ ಅಬಕಾರಿ ಸಚಿವ ನಾಗೇಶ್ ಎನ್ನಲಾಗುತ್ತಿದೆ. ಇದನ್ನೂ ಓದಿರಿ ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಈ ಸುದ್ದಿ ಹರಡುತ್ತಿದ್ದಂತೆ ಸಿಎಂ ನಿವಾಸ ಕಾವೇರಿ ಬಳಿ ಜಮಾಯಿಸಿದ ನಾಗೇಶ್ ಬೆಂಬಲಿಗರು, ಒಳ ನುಗ್ಗಲು ಯತ್ನಿಸಿದರು. ಅವರನ್ನು ಗೇಟ್​ ಬಳಿಯೇ ಪೊಲೀಸರು ತಡೆದರು. ನಮಗೆ ಒಳ ಹೋಗಲು ಅವಕಾಶ ಮಾಡಿಕೊಡಿ ಎಂದು ಏರುಧ್ವನಿಯಲ್ಲೇ ಆಗ್ರಹಿಸಿದರು. ಈ ವೇಳೆ ಪೊಲೀಸರು ಮತ್ತು ನಾಗೇಶ್​ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಬಿ.ಎಸ್​.ಯಡಿಯೂರಪ್ಪ ಅವರು ಸಿಎಂ ಆಗುವುದಕ್ಕೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ನಾಗೇಶ್ ಕಾರಣ. ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇ ನಾಗೇಶ್. ಉಳಿಕೆ 17 ಶಾಸಕರ ಜತೆ ಕೈಜೋಡಿಸಿ ಸರ್ಕಾರ ಬರಲು ಕಾರಣರಾದರು. ಮೂರು ವರ್ಷ ನೀವು ಸಚಿವರಾಗಿ ಇರ್ತೀರಾ ಎಂದು ನಾಗೇಶ್​ಗೆ ಸಿಎಂ ಭರವಸೆ ಕೊಡ್ಡಿದ್ದರು. ಒಂದು ವೇಳೆ ಸಚಿವ ಸ್ಥಾನದಿಂದ ನಾಗೇಶ್​ರನ್ನ ಕೈಬಿಟ್ರೆ ಕೋಲಾರದಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡ್ತೀವಿ ಎಂದು ವಿಜಯ್​ಕುಮಾರ್​ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net