ಬಜರಂಗದಳ ಬ್ಯಾನ್ ಮಾಡಲಿ ಎಂದು ಹೇಳಲು ನಲಪಾಡ್ ಯಾರು?; ಈಶ್ವರಪ್ಪ

K S Eshwarappa
Published on

ಶಿವಮೊಗ್ಗ: ನಲಪಾಡ್ ಪರಪ್ಪನ ಅಗ್ರಹಾರದಲ್ಲಿ ಇದ್ದು ಬಂದವನು. ಪಿಎಫ್ಐ ಹಾಗೂ ಎಸ್​ಡಿಪಿಐನಂತಹ ರಾಷ್ಟ್ರದ್ರೋಹಿಗಳ ಪರ ನಲಪಾಡ್ ಇದ್ದಾನೆ. ಬಜರಂಗದಳ ಬ್ಯಾನ್ ಮಾಡು ಎಂದು ಹೇಳಲು ಇವನ್ಯಾರು ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದರು.

ಮೊಹಮ್ಮದ್ ನಲಪಾಡ್ ಈ ಹಿಂದೆ ಬಜರಂಗದಳ ಬ್ಯಾನ್ ಮಾಡಲಿ ಎಂಬ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಉದ್ಯೋಗವಿಲ್ಲದೇ ಭಯೋತ್ಪಾದನಾ ಚಟುವಟಿಕೆ ಮಾಡ್ತಾರೆ ಅಂತಾ ಹೇಳ್ತಾನೆ. ಕೇವಲ ಮುಸಲ್ಮಾನರಿಗೆ ಮಾತ್ರ ನಿರುದ್ಯೋಗ ಸಮಸ್ಯೆ ಇದೆಯಾ? ಹಿಂದೂ - ಮುಸ್ಲಿಂರನ್ನು ಒಡೆದು ಕಾಂಗ್ರೆಸ್ ಈ ದೇಶ ಹಾಳು ಮಾಡಿದೆ. ಪಾಕಿಸ್ತಾನ - ಹಿಂದೂಸ್ತಾನ ಮಾಡಿ ಆಯ್ತು. ಇದೀಗ ಹಿಂದೂ - ಮುಸ್ಲಿಮರನ್ನು ದೂರ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಮುಸಲ್ಮಾನ ರಾಷ್ಟ್ರ ಭಕ್ತರಿಗೆ ನಾನು ಪ್ರಾರ್ಥನೆ ಮಾಡುತ್ತೇನೆ. ನಲಪಾಡ್ ರಾಷ್ಟ್ರದ್ರೋಹಿಗಳ ಪರವಾಗಿದ್ದಾನೆ. ಇಂತವರನ್ನು ದೂರ ಇಡಿ. ಹೆತ್ತವರು ನಿಮ್ಮ ಮನೆ ಯುವಕರು ಪಿಎಫ್ಐ, ಎಸ್​ಡಿಪಿಐ ಸೇರದಂತೆ ಗಮನ ಹರಿಸಿ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net