ಕೇರ್ ಟೇಕರ್ ಆಗಿ ಬಂದವಳು ಮಾಡಿದ ಕೃತ್ಯ ನೋಡಿ ಮನೆಮಂದಿ ಕಂಗಾಲು!

4041
Published on

ಬೆಂಗಳೂರು: ಎಲ್ಲರದ್ದೂ ಓಡಾಟದ ಬದುಕು. ಕೆಲಸದ ಒತ್ತಡದ ನಡುವೆ ಮನೆಗೆ, ಮನೆಮಂದಿಗೆ ಸಮಯ ಕೊಡಲು ಸಾದ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲಿ ಹಿರಿಯರು ಯಾರಾದರು ಇದ್ದರೆ, ಅವರ ಯೋಗಕ್ಷೇಮ ನೋಡಿಕೊಳ್ಳಲು ಯಾರಾದರು ಕೇರ್​ ಟೇಕರ್ ಒಬ್ಬರ​ನ್ನು ನೇಮಿಸಿಕೊಳ್ಳುತ್ತಾರೆ. ಇದೀಗ ಕೇರ್​ ಟೇಕರ್ ಆಗಿ ಮನೆ ಪ್ರವೇಶಿಸಿ, ಕಳ್ಳಿಯಾಗಿ ಹೊರ ನಡೆದ ಪ್ರಕರಣವೊಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪರ್ಣ ಎಂಬುವರು ಮನೆಯಲ್ಲಿ ತಂದೆಯನ್ನು ನೋಡಿಕೊಳ್ಳಲು ಉಮಾದೇವಿ ಎಂಬ ಕೇರ್ ಟೇಕರ್ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಈ ವೇಳೆ ಮನೆಯಲ್ಲಿದ್ದ ಹಣ, ಚಿನ್ನ ಹಾಗೂ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಪರ್ಣ ಎಂಬುವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿ ಉಮಾದೇವಿಯನ್ನು ಬಂಧಿಸಿರುವ ಪೊಲೀಸರು 15 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ನಗದು ವಶಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net