'ಎಲೆಕ್ಟ್ರಾನಿಕ್ ಸಿಟಿ' ಇದು ಬೆಂಗಳೂರಿನ ಕಥೆ!

Untitled design - 2023-11-20T190700.634
Published on

ಬೆಂಗಳೂರು: ಬೆಂಗಳೂರಿಗೆ ಐಟಿ ಸಿಟಿ ಎಂದು ಹೆಸರು ಬರಲು 'ಎಲೆಕ್ಟ್ರಾನಿಕ್ ಸಿಟಿ' ಪ್ರಮುಖ ಕಾರಣ. ಅಷ್ಟು ಐಟಿ ಕಂಪನಿಗಳು ಅಲ್ಲಿದೆ. ಅಂತಹ ಪ್ರತಿಷ್ಠಿತ ಬಡಾವಣೆಯ ಹೆಸರೇ ಇದೀಗ ಚಿತ್ರವೊಂದರ ಶೀರ್ಷಿಕೆಯಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು.

ಕೆ.ಪಿ.ಸಿ.ಸಿ ಜನರಲ್ ಸೆಕ್ರೆಟರಿ ಶಿವಣ್ಣ, ಶಿಕ್ಷಣ ತಜ್ಞ ವುಡೆ ಪಿ. ಕೃಷ್ಣ ಹಾಗೂ ಚಲನಚಿತ್ರ ನಿರ್ದೇಶಕ ಲಿಂಗದೇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿಕ್ಕಣ್ಣ ನಿರ್ಮಿಸಿ, ನಿರ್ದೇಶಿಸಿರುವ "ಎಲೆಕ್ಟ್ರಾನಿಕ್ ಸಿಟಿ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

"ನಾನು ಹದಿನಾರು ವರ್ಷದಿಂದ ಐಟಿ ಉದ್ಯೋಗದಲ್ಲಿದ್ದೇನೆ‌. ಐಟಿ ಉದ್ಯೋಗಿಗಳ ಬದುಕಿನ ಬಗ್ಗೆ ಚಿತ್ರ ಮಾಡುವ ಅಸೆ ಬಂತು‌. ಐದು ವರ್ಷಗಳ ಹಿಂದೆ ಈ ಚಿತ್ರದ ಕಥೆ ಬರೆದೆ. ಕಥೆಯ ಕುರಿತು ಚಿತ್ರರಂಗದ ಅನೇಕರ ಜತೆ ಚರ್ಚಿಸಿ, 2021ರಲ್ಲಿ ಚಿತ್ರೀಕರಣ ಆರಂಭಿಸಿದೆ‌. 2022 ರಲ್ಲಿ ಚಿತ್ರ ಸಿದ್ದವಾಯಿತು. ಈವರೆಗೂ 42ಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿರುವ ನಮ್ಮ ಸಿನಿಮಾ 30ಕ್ಕೂ ಅಧಿಕ ಪ್ರಶಸ್ತಿಗಳನ್ನು ವಿವಿಧ ಭಾಗಗಳಲ್ಲಿ ಪಡೆದುಕೊಂಡಿದೆ. ನವೆಂಬರ್ 24ರಂದು ಚಿತ್ರ ತೆರೆಗೆ ಬರಲಿದೆ ನೋಡಿ ಹಾರೈಸಿ" ಎಂದರು ನಿರ್ದೇಶಕ ಹಾಗೂ ನಿರ್ಮಾಪಕರಾದ ಆರ್ ಚಿಕ್ಕಣ್ಣ ಹೇಳಿದರು.

ಸಿನಿಮಾದಲ್ಲಿನ ಪಾತ್ರದ ಬಗ್ಗೆ ಮಾತನಾಡಿದ ನಾಯಕ ಆರ್ಯನ್ ಶೆಟ್ಟಿ, ಚಿತ್ರದಲ್ಲಿ ನಾನೊಬ್ಬ ಐಟಿ ಉದ್ಯೋಗಿ. ಚಿಕ್ಕಣ್ಣ ಅವರ ನಿರ್ದೇಶನದಲ್ಲಿ ಫಿಲಂ ಉತ್ತಮಾಗಿ ಮೂಡಿಬಂದಿದೆ. ಈ ಚಿತ್ರದಿಂದ ನನಗೆ "ಘೋಸ್ಟ್"ನಲ್ಲಿ ನಟಿಸುವ ಅವಕಾಶ ಕೂಡ ದೊರೆಯಿತು ಎಂದು ಸಂತಸದಿಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net