

ಬೆಂಗಳೂರು: ವಿಧಾನಸಭಾ ಚುನಾವಣೆಯ ನೀತಿ ಸಂಹಿತ ಜಾರಿಯಾಗುತ್ತಿದ್ದಂತೆ ರಾಜ್ಯದಾದ್ಯಂತ ಚುನಾವಣಾ ಆಯೋಗದ ಅಧಿಕಾರಿಗಳು ಅಲರ್ಟ್ ಆಗಿದ್ದರು. ಅನುಮಾನ ಬಂದ ಕಡೆಗಳಲ್ಲಿ ದಾಳಿ ಮಾಡುವ ಮೂಲಕ ಸಾಕಷ್ಟು ಅಕ್ರಮಗಳನ್ನು ಬಯಲಿಗೆ ಎಳೆದಿದ್ದರು. ಇದೀಗ ನೀತಿ ಸಂಹಿತೆ ಜಾರಿಯಾಗದ ಬಳಿಕ ಬೆಂಗಳೂರಿನಲ್ಲಿ ಚುನಾವಣಾ ಆಯೋಗ ಸಾಕಷ್ಟು ಅಕ್ರಮ ಹಣ, ಮದ್ಯ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಬೆಂಗಳೂರಿನಲ್ಲಿ ಈವರೆಗೆ 13.30 ಕೋಟಿ ರೂಪಾಯಿ ಅಕ್ರಮ ನಗದು ಹಣವನ್ನು ಚುಣಾವಣಾ ಆಯೋಗ ವಶಪಡಿಸಿಕೊಂಡಿದೆ. 24 ಕೋಟಿ ರೂಪಾಯಿ ಮೌಲ್ಯದ 3,51,257 ಲೀ. ಮದ್ಯ ವಶಪಡಿಸಿಕೊಂಡಿದೆ. 14.4 ಕೋಟಿ ರೂ. ಮೌಲ್ಯದ 785 ಕೆ.ಜಿ ಮಾದಕ ವಸ್ತು ಹಾಗೂ ಅಕ್ರಮವಾಗಿ ಹಣ, ಮದ್ಯ, ಡ್ರಗ್ಸ್ ಸಾಗಿಸುತ್ತಿದ್ದ 213 ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 8,645 ಎಫ್ಐಆರ್ ದಾಖಲಾಗಿದೆ.