ಎಲೆಕ್ಷನ್ ಬಾಂಡ್ ಬಯಲು

Electoral bond
Published on

ನವದೆಹಲಿ: ಬಹುರ್ಚಚಿತ ಎಲೆಕ್ಟೋರಲ್ ಬಾಂಡ್​ಗಳ ಕುರಿತಂತೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ನೀಡಿರುವ ಮಾಹಿತಿಯನ್ನು ಚುನಾವಣಾ ಆಯೋಗ ಗುರುವಾರ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಆ ಮೂಲಕ ಎಸ್​ಬಿಐ ಹಾಗೂ ಚುನಾವಣಾ ಆಯೋಗಗಳು ಸುಪ್ರೀಂಕೋರ್ಟ್ ಕೆಂಗಣ್ಣಿನಿಂದ ಪಾರಾದಂತಾಗಿವೆ.

ಲೆಕ್ಕ ಬಹಿರಂಗವಿಲ್ಲ: ಎಸ್​ಬಿಐ ನೀಡಿದ ಎಲೆಕ್ಟೋರಲ್ ಬಾಂಡ್​ಗಳ ಮಾಹಿತಿಯನ್ನು ಆಯೋಗವು 2 ವಿಭಾಗಗಳಲ್ಲಿ ಗುರುವಾರ ರಾತ್ರಿ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಯಾವ ಕಂಪನಿ, ಯಾವತ್ತು, ಎಷ್ಟು ಮೊತ್ತದ ಎಲೆಕ್ಟೋರಲ್ ಬಾಂಡ್ ಖರೀದಿಸಿದೆ. ಯಾವ ರಾಜಕೀಯ ಪಕ್ಷ ಯಾವತ್ತು ಎಷ್ಟು ಮೊತ್ತದ ಬಾಂಡ್ ಎನ್​ಕ್ಯಾಷ್ ಮಾಡಿಕೊಂಡಿದೆ ಎಂಬ ವಿವರವಷ್ಟೇ ಇದರಲ್ಲಿದೆ. ಎಸ್​ಬಿಐ ಈ ಬಾಂಡ್​ಗಳ

ಒಟ್ಟು ಮೊತ್ತದ ಲೆಕ್ಕ ತೋರಿಲ್ಲ ಹಾಗೂ ಯಾರು ಯಾರಿಗೆ ನೀಡಿದರು ಎಂಬುದನ್ನೂ ಉಲ್ಲೇಖಿಸಿಲ್ಲ. ಬಾಂಡ್ ಖರೀದಿ ಸಿದ ಕಂಪನಿಗಳು, ಎನ್​ಕ್ಯಾಷ್ ಮಾಡಿಕೊಂಡ ಪಕ್ಷಗಳ ವಿವರವನ್ನು ಪ್ರತ್ಯೇಕ ವಿಭಾಗಗಳಲ್ಲಿ ನೀಡಿದೆ.

ಏನಿದು ಪ್ರಕರಣ?: ಸುಪ್ರೀಂಕೋರ್ಟ್ ಫೆ. 15ರಂದು ಎಲೆಕ್ಟೋರಲ್ ಬಾಂಡ್ ಯೋಜನೆ ರದ್ದುಗೊಳಿಸಿದ್ದಲ್ಲದೆ, ಅದನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿತ್ತು. ಎಲೆಕ್ಟೋರಲ್ ಬಾಂಡ್ ಸ್ವೀಕರಿಸುವ ಅಧಿಕೃತ ಹಣಕಾಸು ಸಂಸ್ಥೆ ಆಗಿರುವ ಎಸ್​ಬಿಐ 2019ರ ಏ.12ರಿಂದ ಇದುವರೆಗೆ ಸ್ವೀಕರಿಸುವ ಬಾಂಡ್​ಗಳ ವಿವರವನ್ನು ಮಾ.6ರ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದೂ ಆದೇಶಿಸಿತ್ತು. ಆದರೆ ಜೂ. 30ರ ವರೆಗೆ ಕಾಲಾವಕಾಶ ನೀಡಬೇಕು ಎಂದು ಎಸ್​ಬಿಐ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಆದರೆ ಮಾ. 11ರಂದು ಎಸ್​ಬಿಐನ ಈ ಮನವಿಯ ಅರ್ಜಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಮಾ. 12ರ ಸಂಜೆ 5ರ ಒಳಗೆ ಚುನಾವಣಾ ಆಯೋಗಕ್ಕೆ ಬಾಂಡ್​ಗಳ ಮಾಹಿತಿ ಸಲ್ಲಿಸಲೇಬೇಕು ಎಂದು ತಾಕೀತು ಮಾಡಿತ್ತು. ಹಾಗೆಯೇ ಆಯೋಗವು ಈ ವಿವರಗಳನ್ನು ಮಾ.15ರ ಸಂಜೆ 5ರ ಒಳಗೆ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿತ್ತು . ಇದೀಗ ಆಯೋಗವು ನ್ಯಾಯಾಲಯ ವಿಧಿಸಿದ್ದ ಗಡುವಿನ ಹಿಂದಿನ ದಿನವೇ ಈ ವಿವರಗಳನ್ನು ಜಠಿಠಿಟಠ://ಡಿಡಿಡಿ.ಛ್ಚಿಜಿ.ಜಟಡ.ಜ್ಞಿ/ಛಜಿಠ್ಚ್ಝಠ್ಠ್ಟಟ್ಛಛ್ಝಿಛ್ಚಿಠಿಟ್ಟಚ್ಝಚಿಟ್ಞಛಠ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಿದೆ.

ಏನೆಲ್ಲ ಮಾಹಿತಿ ಇದೆ?

  • 2 ವಿಭಾಗಗಲ್ಲಿ ಆಯೋಗದ ವರದಿ ಪ್ರಕಟ
  • ಒಂದರಲ್ಲಿ 337 ಪುಟಗಳ ಮಾಹಿತಿ ಲಭ್ಯ
  • ಇನ್ನೊಂದರಲ್ಲಿ 426 ಪುಟದ ವಿವರಣೆ
  • 2019 ಏ.12ರಿಂದ 2024ರ ಜ.24ರ ವಿವರ

ಅತಿಹೆಚ್ಚಿನ ಬಾಂಡ್​ದಾರರು

  • ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸ್: 1,368 ಕೋಟಿ ರೂ.
  • ಮೇಘ ಇಂಜಿನಿಯರಿಂಗ್ ಆಂಡ್ ಇನ್​ಫ್ರಾಸ್ಟ್ರಕ್ಚರ್ ಲಿ.: 966 ಕೋಟಿ ರೂ.
  • ಕ್ವಿಕ್ ಸಪ್ಲೈ ಚೈನ್ ಪ್ರೖೆ. ಲಿ.: 410 ಕೋಟಿ ರೂ.
  • ವೇದಾಂತ ಲಿ.: 400 ಕೋಟಿ ರೂ.
  • ಹಲ್ದಿಯಾ ಎನರ್ಜಿ ಲಿ.: 377 ಕೋಟಿ ರೂ.
  • ಭಾರ್ತಿ ಗ್ರೂಪ್: 247 ಕೋಟಿ ರೂ.
  • ಎಸ್ಸೆಲ್ ಮೈನಿಂಗ್ ಇಂಡ್ಸ್ ಲಿ. : 224 ಕೋಟಿ ರೂ.
  • ವೆಸ್ಟನ್ ಯುಪಿ ಪವರ್ ಟ್ರಾನ್ಸ್​ಮಿಷನ್ ಕಂಪನಿ ಲಿ.: 220 ಕೋಟಿ ರೂ.
  • ಕೆವೆಂಟರ್ ಫುಡ್ ಪಾರ್ಕ್ ಇನ್​ಫ್ರಾ ಲಿ.: 195 ಕೋಟಿ ರೂ.
  • ಮದನ್​ಲಾಲ್ ಲಿ.: 185 ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net