

ಸೊರಬ: ಪಟ್ಟಣದ ದಂಡಾವತಿ ಸೇತುವೆಯಿಂದ ನದಿಗೆ ಬಿದ್ದಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾರೆ. ಶಿಕಾರಿಪುರ ತಾಲೂಕಿನ ಇಡುಕಿನಹೊಸಕೊಪ್ಪ ಗ್ರಾಮದ ಕೆರಿಯಮ್ಮ (65) ಮೃತಪಟ್ಟವರು. ಶುಕ್ರವಾರ ಹಳೇಸೊರಬದ ಮಗಳ ಮನೆಯಿಂದ ಪಟ್ಟಣಕ್ಕೆ ಆಗಮಿಸುವಾಗ ದಂಡಾವತಿ ನದಿ ಸೇತುವೆ ಮೇಲಿಂದ ಕಾಲು ಜಾರಿ ನದಿಗೆ ಬಿದ್ದಿದ್ದರು. ಅಗ್ನಿಶಾಮಕ ದಳದ ಠಾಣಾಧಿಕಾರಿ ಕೆ.ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ತಂಡದವರು ಸತತ ಕಾರ್ಯಾಚರಣೆ ನಡೆಸಿದ್ದರು. ಘಟನಾ ಸ್ಥಳದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಶವ ಸಿಕ್ಕಿದೆ. ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಶಂಕರ್, ಪ್ರಮುಖ ಅಗ್ನಿಶಾಮಕ ಎಚ್.ಎಂ.ಪ್ರಶಾಂತ್, ಕೆ.ಪ್ರಕಾಶ್, ಸಂದೀಪ್ ರಾಥೋಡ್, ಮುಬಾರಕ್, ಶ್ರೀಶೈಲ, ಮಂಗಳೂರಿನ ಮುಳುಗು ತಜ್ಞ ಹರೀಶ್ ಕಾರ್ಯಾಚರಣೆಯಲ್ಲಿದ್ದರು.