ಎಂಟು ದಿನ ಕೇರಳ ಸಂಪೂರ್ಣ ಲಾಕ್​ಡೌನ್​: ಒಂದೇ ದಿನದಲ್ಲಿ 42 ಸಾವಿರ ಕರೊನಾ ಕೇಸ್!

KeralaAssembly
Published on

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಹೊಡೆತದ ಪರಿಣಾಮ ಪೂರ್ತಿ ಲಾಕ್‌ಡೌನ್‌ ಘೋಷಿಲಾಗಿದೆ. ಮೇ 8ರಂದು ಬೆಳಗ್ಗೆ 6 ಗಂಟೆಯಿಂದ ಮೇ 16 ವರೆಗೆ ಸಂಪೂರ್ಣ ಲಾಕ್ ಡೌನ್ ಆಗಿರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆದೇಶ ಪ್ರಕಟಿಸಿದ್ದಾರೆ.

ಒಂದೇ ದಿನ 41953 ಕೋವಿಡ್‌ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅವರು ಈ 9 ದಿನಗಳ ಲಾಕ್‌ಡೌನ್‌ ನಿರ್ಧಾರ ತೆಗೆದುಕೊಂಡರು. ಮೇ 8ರಂದು ಬೆಳಗ್ಗೆ 6ರಿಂದ ಮೇ 169ರ ರಾತ್ರಿ 9ರ ವರೆಗೆ ಆದೇಶ ಜಾರಿಯಲ್ಲಿರುತ್ತದೆ.

ಲಭ್ಯ ಮಾಹಿತಿ ಪ್ರಕಾರ ಕೇವಲ ಅಗತ್ಯ ವಸ್ತು ಖರೀದಿಗಷ್ಟೇ ನಿರ್ದಿಷ್ಟ ಅವಧಿ ಮೀಸಲಿಡಲಾಗುವುದು. ವಾರಾಂತ್ಯವಷ್ಟೇ ಇದುವರೆಗೆ ಕೇರಳದಲ್ಲಿ ಲಾಕ್‌ಡೌನ್‌ ಇರುತ್ತಿತ್ತು, ಇದು ಅಷ್ಟರ ಮಟ್ಟಿಗೆ ಪರಿಣಾಮಕಾರಿಯಲ್ಲ ಎಂದು ಕೇರಳದ ತಂತ್ರಜ್ಞರ ಸಮಿತಿ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಪೂರ್ಣ ಲಾಕ್‌ಡೌನ್‌ ಘೋಷಿಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net