More

    ಭಾರತದ ಪ್ರಯಾಣಿಕರನ್ನು ನಿಷೇಧಿಸಿದ ಶ್ರೀಲಂಕಾ

    ಕೊಲಂಬೊ : ಭಾರತದ ಪ್ರಯಾಣಿಕರನ್ನು ನಿಷೇಧಿಸಿರುವ ದೇಶಗಳ ಸಾಲಿಗೆ ಇದೀಗ ಶ್ರೀಲಂಕಾ ಕೂಡ ಸೇರಿಕೊಂಡಿದೆ. ಪ್ರಸ್ತುತ ಕರೊನಾ ಎರಡನೇ ಅಲೆಯ ಕಾರಣದಿಂದಾಗಿ ಭಾರತದಿಂದ ಯಾವುದೇ ಪ್ರಯಾಣಿಕರು ಶ್ರೀಲಂಕಾದಲ್ಲಿ ವಿಮಾನ ಇಳಿಯುವ ಹಾಗಿಲ್ಲ ಎಂದು ಅಲ್ಲಿನ ನಾಗರೀಕ ವಿಮಾನಯಾನ ಪ್ರಾಧಿಕಾರ ಆದೇಶ ಹೊರಡಿಸಿದೆ. ಇಂಗ್ಲೆಂಡ್​, ಯುಎಇ, ಆಸ್ಟ್ರೇಲಿಯಾ ಮತ್ತು ಸಿಂಗಪೂರ್​ ಈಗಾಗಲೇ ಭಾರತ ಮತ್ತು ಇತರ ದಕ್ಷಿಣ ಏಷ್ಯಾದ ದೇಶಗಳ ಪ್ರಯಾಣಿಕರ ಮೇಲೆ ನಿಷೇಧ ವಿಧಿಸಿವೆ.

    ಕರೊನಾ ಹರಡುತ್ತಿದ್ದರೂ ಕೂಡ ಪಶ್ಚಿಮ ಏಷ್ಯಾ ಮತ್ತು ಸಿಂಗಪುರ್​​ಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಟ್ರಾನ್ಸಿಟ್​ ಹಬ್​​ನಂತೆ ಶ್ರೀಲಂಕಾ ಸೇವೆ ಒದಗಿಸುತ್ತಿತ್ತು. ಭಾರತೀಯ ಪ್ರವಾಸಿಗಳಿಗೆ ಟ್ರಾವೆಲ್​ ಬಬಲ್​ಅನ್ನು ರೂಪಿಸಿ 14 ದಿನ ಕ್ವಾರಂಟೈನ್ ಅವಕಾಶವನ್ನು ಮಾಡಿತ್ತು. ಆದರೆ ಇನ್ನು ಮುಂದೆ ಭಾರತದಿಂದ ಪ್ರಯಾಣ ಮಾಡುವವರಿಗೆ, ಶ್ರೀಲಂಕಾದಲ್ಲಿ ವಿಮಾನ ಇಳಿಯುವ ಅವಕಾಶ ನೀಡಬಾರದೆಂದು ಸಿವಿಲ್ ಏವಿಯೇಷನ್ ಡೈರೆಕ್ಟರ್​ ಜನರಲ್ ಅವರು, ಶ್ರೀಲಂಕನ್​​ ಏರ್​ಲೈನ್ಸ್​​ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಕ್ರೀಡಾಂಗಣದ ಹೊರಗೆ ಕಾದಾಡಿದ ಕುಸ್ತಿಪಟುಗಳು ! ಒಲಂಪಿಕ್​ ಚಾಂಪಿಯನ್​ ಸುಶೀಲ್​ಕುಮಾರ್​ ವಿರುದ್ಧ ಎಫ್​.ಐ.ಆರ್​.

    ಶ್ರೀಲಂಕಾದಲ್ಲೂ ಕರೊನಾ ಸೋಂಕು ಹರಡುತ್ತಿದ್ದು, ಏಪ್ರಿಲ್​ ನಡುವೆ ದಿನಕ್ಕೆ ಸರಿಸುಮಾರು 200 ಕರೊನಾ ಪ್ರಕರಣಗಳು ಬರುತ್ತಿದ್ದುದು, ಕಳೆದ 5 ದಿನಗಳಿಂದ ದಿನಂಪ್ರತಿ 2,000 ಪ್ರಕರಣಗಳಾಗಿ ಏರಿಕೆ ಕಂಡಿದೆ. ಈ ದ್ವೀಪ ದೇಶದಲ್ಲಿ ಏಪ್ರಿಲ್​ನಲ್ಲಿ ನಡೆದ ಪಾರಂಪರಿಕ ಹೊಸ ವರ್ಷ ಆಚರಣೆಯ ಬೆನ್ನಲ್ಲೇ ಇಂಗ್ಲೆಂಡ್​​ನ ರೂಪಾಂತರಿ ಕರೊನಾ ವೈರಸ್​ ಸೋಂಕಿನ ಪ್ರಕರಣಗಳು ಹೆಚ್ಚಿವೆ ಎನ್ನಲಾಗಿದೆ.

    ಉಕ್ಕು ಕಾರ್ಖಾನೆಗಳಿಂದ ಹೆಚ್ಚಿದೆ ಮೆಡಿಕಲ್ ಆಕ್ಸಿಜನ್ ಪೂರೈಕೆ

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts