ಕಾಲುಗಳಿಗೆ ಶಕ್ತಿ ತುಂಬುವ ಸರಳ ಯೋಗಾಸನ - ಎಲ್ಲರೂ ಮಾಡಬಹುದು!

1145065
Published on

ಉತ್ಥಿತ ಏಕಪಾದಾಸನ ಎಂಬುದು ಕಾಲುಗಳಿಗೆ ಹೆಚ್ಚು ಶಕ್ತಿ ತುಂಬುವ ಸರಳ ಯೋಗಾಸನ. ಮಲಗಿಕೊಂಡು ಬೆನ್ನಿನ ಆಧಾರದ ಮೇಲೆ ಸುಲಭವಾಗಿ ಮಾಡುವ ಆಸನವಿದು.

ಮಾಡುವ ವಿಧಾನ : ಜಮಖಾನ ಅಥವಾ ಯೋಗ ಮ್ಯಾಟ್​ ಹಾಸಿ ಬೆನ್ನಿನ ಮೇಲೆ ಮಲಗುವುದು. ಕಾಲುಗಳನ್ನು ಜೋಡಿಸಿ, ಕೈಗಳನ್ನು ತೊಡೆಯ ಪಕ್ಕದಲ್ಲಿರಿಸುವುದು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಬಲಗಾಲನ್ನು ಮೇಲೆತ್ತಬೇಕು. ಮತ್ತೆ ನಿಧಾನವಾಗಿ ಉಸಿರು ಬಿಡುತ್ತಾ ಕಾಲನ್ನು ಇಳಿಸಬೇಕು. ಬೆರಳು ನೇರವಾಗಿ ಪಾಯಿಂಟ್​ ಆಗಿರಬೇಕು ಮತ್ತು ಮಂಡಿ ನೇರವಾಗಿರಬೇಕು. ಮತ್ತೆ ಎಡಗಾಲನ್ನು ಅದೇ ರೀತಿ ಮೇಲಕ್ಕೆ ಎತ್ತುವುದು, ಕೆಳಕ್ಕೆ ಇಳಿಸುವುದು. ಮೊದಲಿಗೆ 2-3 ಬಾರಿ ಮಾಡಬೇಕು. ಕ್ರಮೇಣ ಅಭ್ಯಾಸವಾದಂತೆ 9 ಬಾರಿ, 16 ಬಾರಿ ಮಾಡಬಹುದು.

ಪ್ರಯೋಜನಗಳು : ಈ ಆಸನವನ್ನು ಎಲ್ಲರೂ ಮಾಡಬಹುದು. ಕೆಳಬೆನ್ನು ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಕಾಲಿನ ನರಗಳ ಸೆಳೆತ, ಮಂಡಿನೋವು ಮತ್ತು ಬೆನ್ನು ನೋವು ನಿಯಂತ್ರಣ ಮಾಡುತ್ತದೆ. ಪಿತ್ತ ಜನಕಾಂಗ, ಮೂತ್ರಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net