ಡಿವೈಎಫ್​ಐ ಕಾರ್ಯಕರ್ತನ ಹತ್ಯೆ

murder
Published on

ಕಾಸರಗೋಡು: ಜಿಲ್ಲೆಯ ಕಾಞಂಗಾಡು ಕಲ್ಲೂರಾವಿಯಲ್ಲಿ ಡಿವೈಎಫ್​ಐ ಕಾರ್ಯಕರ್ತನನ್ನು ಬುಧವಾರ ತಡರಾತ್ರಿ ತಂಡವೊಂದು ಹತ್ಯೆಗೈದಿದೆ.

ಹಳೇಕಡಪ್ಪುರ ಮಸೀದಿ ಸಮೀಪದ ನಿವಾಸಿ ಕುಞಬ್ದುಲ್ಲ ದಾರಿಮಿ ಅವರ ಪುತ್ರ ಅಬ್ದುಲ್​ ರಹಮಾನ್​(28) ಯಾನೆ ಔಫ್​ ಅಬ್ದುಲ್​ ರಹಮಾನ್​ ಮೃತ. ಇವರ ಸ್ನೇಹಿತ ಸುಹೈಬ್​ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅಬ್ದುಲ್​ ರಹಮಾನ್​ ತನ್ನ ಸ್ನೇಹಿತರ ಜತೆ ಬೈಕ್​ಗಳಲ್ಲಿ ತೆರಳುತ್ತಿದ್ದಾಗ ಕಲ್ಲೂರಾವಿ ಮುಂಡತ್ತೋಡ್​ ಬಳಿ ಘಟನೆ ನಡೆದಿದೆ. ಎದೆಗೆ ಇರಿತದ ಗಾಯಗೊಂಡಿದ್ದ ಅಬ್ದುಲ್​ ರಹಮಾನ್​ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಯುವಕನ ಹತ್ಯೆ ಖಂಡಿಸಿ ಗುರುವಾರ ಕಾಞಂಗಾಡು ನಗರ ವ್ಯಾಪ್ತಿಯಲ್ಲಿ ಹರತಾಳ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net