More

    ರಾಜ್ಯದ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಪಾಸಿಟಿವ್​

    ದಾವಣಗೆರೆ: ಮಹಾಮಾರಿ ಕರೊನಾ ವ್ಯಾಪ್ತಿ ದಿನೇದಿನೆ ವಿಸ್ತರಿಸುತ್ತಲೇ ಇದೆ. ಇದರ ಬೆನ್ನಲ್ಲೇ ಹೊಸ ರೂಪಾಂತರ ಕರೊನಾ ಸೋಂಕಿನ ಭೀತಿಯೂ ಆವರಿಸಿದ್ದು, ಬಿಟ್ರನ್​ ಕರೊನಾ ನಿಯಂತ್ರಿಸಲು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ ಜಾರಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೋವಿಡ್​ ಪಾಸಿಟಿವ್​ ಬಂದಿದೆ.

    ದಾವಣಗೆರೆಯ ನರ್ಸಿಂಗ್‌ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಚಿಗೆಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿರಿ ನೈಟ್​ ಕರ್ಫ್ಯೂ ದಿನಾಂಕ-ಸಮಯದಲ್ಲಿ ಬದಲಾವಣೆ: ಸಿಎಂ ಯಡಿಯೂರಪ್ಪ

    ಸಹಜವಾಗಿ ಎಲ್ಲ ಕಾಲೇಜಿನಂತೆ ಇಲ್ಲಿಯೂ ವಿದ್ಯಾರ್ಥಿಗಳನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂರು ದಿನಗಳಿಂದ ಸ್ವ್ಯಾಬ್‌ ಸಂಗ್ರಹಿಸಲಾಗಿತ್ತು. ಆ ಪೈಕಿ 21 ವಿದ್ಯಾರ್ಥಿನಿಯರ ವರದಿ ಪಾಸಿಟಿವ್​ ಬಂದಿದೆ. ಈ ವಿದ್ಯಾರ್ಥಿಗಳು ಕೇರಳಾದಿಂದ ಬಂದಿದ್ದರು.

    ಚಿಕಿತ್ಸೆ ನೀಡಲಾಗುತ್ತಿದ್ದು. ಎಲ್ಲರೂ ಸ್ಪಂದಿಸುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಇದ್ಯಾವುದೂ ಇಂಗ್ಲೆಂಡ್‌ ಕರೊನಾ ಅಲ್ಲ ಎಂದು ‘ದಿಗ್ವಿಜಯ ನ್ಯೂಸ್‌’ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್‌ ಮಾಹಿತಿ ನೀಡಿದ್ದಾರೆ.

    ಸಿರಗುಪ್ಪ ತಹಸೀಲ್ದಾರ್​ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

    ರಾಜ್ಯ ಸಚಿವ ಸಂಪುಟದಲ್ಲಿ ಸಂಕ್ರಾಂತಿಗೆ ಮಹತ್ತರ ಬದಲಾವಣೆ, ಇಬ್ಬರು ಸಚಿವರಿಗೆ ಕೊಕ್​!

    ‘ಎಣ್ಣೆ’ ಮತ್ತಲ್ಲಿ ಬಂದ ಅಣ್ಣನಿಗೆ ಬಿಯರ್​ ಬಾಟಲಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ತಂಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts