More

  ಕಾಲೇಜಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

  ಬೆಂಗಳೂರು: ಹೊಸೂರು ರಸ್ತೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ಇದೇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿ ಕರಸಾಲ ರಾಹುಲ್ (21) ಮೃತ. ಮಂಗಳವಾರ ಬೆಳಗ್ಗೆ ಕಾಲೇಜಿಗೆ ತೆರಳಿದ್ದಾಗ ಏಕಾಏಕಿ ಕಟ್ಟಡದ 6ನೇ ಮಹಡಿಯಿಂದ ಜಿಗಿದಿದ್ದಾನೆ. ಪೊಲೀಸರಿಗೆ ಕಾಲೇಜಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಆಂಧ್ರಪ್ರದೇಶದ ಕರ್ನೂಲ್ ಮೂಲದ ರಾಹುಲ್ ಕುಟುಂಬ ಹಲವು ವರ್ಷಗಳ ಹಿಂದೆ ಬಳ್ಳಾರಿಗೆ ವಲಸೆ ಬಂದಿತ್ತು. ಶಿಕ್ಷಣ ಸಲುವಾಗಿ ಬೆಂಗಳೂರಿಗೆ ಬಂದಿದ್ದ ರಾಹುಲ್, ತಾಯಿ ಝಾನ್ಸಿ ರಾಣಿ ಜತೆ ಕೂಡ್ಲುಗೇಟ್ ಸಮೀಪ ನೆಲೆಸಿದ್ದ, ತಂದೆ ಸುನೀಲ್ ವಿಜಯ್ ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದಾರೆ. 5ನೇ ಸೆಮಿಸ್ಟರ್‌ನಲ್ಲಿ ಶೇ.80 ಅಂಕ ಪಡೆದಿದ್ದ ರಾಹುಲ್, ಮಂಗಳವಾರ ಕಿರುಪರೀಕ್ಷೆಗೆ ಗೈರಾಗಿದ್ದ ಎಂದು ತಿಳಿದುಬಂದಿದೆ.

  ಪುತ್ರನ ಸಾವಿನ ವಿಷಯ ತಿಳಿದು ಸಿಂಗಾಪುರದಲ್ಲಿ ಇದ್ದ ತಂದೆ ಸುನೀಲ್ ನಗರಕ್ಕೆ ಮರಳಿದ್ದಾರೆ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ರಾಹುಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂದು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts