More

    ನೈಟ್​ ಕರ್ಫ್ಯೂ ದಿನಾಂಕ-ಸಮಯದಲ್ಲಿ ಬದಲಾವಣೆ: ಸಿಎಂ ಯಡಿಯೂರಪ್ಪ

    ಬೆಂಗಳೂರು: ಹೊಸ ರೂಪಾಂತರ ಕರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಯಾಗಿದ್ದ ಕರ್ಫ್ಯೂನಲ್ಲಿ ಸಮಯ ಮತ್ತು ದಿನಾಂಕದಲ್ಲಿ ಬದಲವಾಣೆ ಮಾಡಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

    ನೈಟ್​ ಕರ್ಫ್ಯೂ ಇಂದು(ಬುಧವಾರ) ರಾತ್ರಿ 10ರಿಂದಲೇ ಜಾರಿ ಆಗಲಿದೆ ಎಂದು ಬುಧವಾರ ಬೆಳಗ್ಗೆಯಷ್ಟೇ ಸಿಎಂ ಯಡಿಯೂರಪ್ಪ ಘೋಷಿಸಿದ್ದರು. ಅದರಂತೆ ಕರ್ನಾಟಕದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಜಾರಿಯಲ್ಲಿರಬೇಕಿತ್ತು. ಆದರೀಗ ಈ ಆದೇಶ ಇಂದಿನಿಂದಲ್ಲ ನಾಳೆಯಿಂದ (ಗುರುವಾರ) ಜಾರಿಗೆ ಬರಲಿದೆ. ಅಲ್ಲದೆ ರಾತ್ರಿ 11 ರಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಕರ್ಫ್ಯೂ ಇರಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಆದೇಶಿಸಿದ್ದಾರೆ.

    ಲಂಡನ್​ನಲ್ಲಿ ಪತ್ತೆಯಾದ ಹೊಸ ಪ್ರಭೇದ ಕರೊನಾ ವೈರಸ್​ ಹಾವಳಿ ತಡೆಗೆ ರಾಜ್ಯಾದ್ಯಂತ ಡಿ.24ರಿಂದ ಜ.2ರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

    ಕೇಂದ್ರ ಸರ್ಕಾರದ ಸಲಹೆ ಹಾಗೂ ತಜ್ಞರ ಅಭಿಪ್ರಾಯದಂತೆ ರೂಪಾಂತರ ಕರೊನಾ ವೈರಾಣು ಸೋಂಕು ನಿಯಂತ್ರಿಸಲು ಈ ಕ್ರಮ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆ, ಔಷಧ ಅಂಗಡಿಯಂತಹ ತುರ್ತು ಅಗತ್ಯ ಸೇವೆಗೆ ನಿರ್ಬಂಧ ಇರುವುದಿಲ್ಲ.
    ಈ ಮೊದಲು ರಾತ್ರಿ 10ರಿಂ ಬೆಳಗ್ಗೆ 6ರವರೆಗೆ ಕರ್ಫ್ಯೂ ಇರಲಿದೆ ಎಂದು ಸಿಎಂ ಹೇಳಿದ್ದರು. ಸಂಜೆ ವೇಳೆಗೆ ನಿರ್ಧಾರದಲ್ಲಿ ಸ್ವಲ್ಪ ಸಡಿಸಿರುವ ಸಿಎಂ, ಸಮಯ ಮತ್ತು ದಿನಾಂಕದಲ್ಲೂ ಬದಲಾವಣೆ ಮಾಡಿ ಟ್ವೀಟ್​ ಮಾಡಿದ್ದಾರೆ.

    ಕುಮಾರಸ್ವಾಮಿ ಈಗಲೂ… ಮುಂದೆಯೂ ನನ್ನ ಸ್ನೇಹಿತ ಎಂದ ಡಿಕೆಶಿ

    ನವ ವಿವಾಹಿತೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ! 15 ದಿನದ ಬಳಿಕ ಬಯಲಾಯ್ತು ರಹಸ್ಯ

    ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts