ವಿಮಾನ ಪತನವಾದ 24 ಗಂಟೆ ಬಳಿಕ ಪತ್ತೆಯಾದ DVR ಬಾಕ್ಸ್​; ಇದೇನಾ ಬ್ಲಾಕ್​​ ಬಾಕ್ಸ್​? ಏನಿದರ ಕಾರ್ಯ..? | Plane Crash

dk - 2025-06-13T170750.229
Published on

Plane Crash: ಗುಜರಾತ್​ನ ಅಹಮದಾಬಾದ್​ನಲ್ಲಿ ನಿನ್ನೆ (ಜೂ.12) ಸಂಭವಿಸಿದ ಏರ್​ ಇಂಡಿಯಾ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಮಾನ ಪತನವಾದ 24 ಗಂಟೆ ಬಳಿಕ ಡಿವಿಆರ್​ ಬಾಕ್ಸ್​ ಪತ್ತೆಯಾಗಿದೆ.

ಅಪಘಾತದ ಸಂಭವಿಸಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಈ ಡಿವಿಆರ್​ ಬಾಕ್ಸ್​ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ದುರಂತಕ್ಕೆ ಪ್ರಮುಖ ಕಾರಣ ಏನು ತಿಳಯಲು ಕಪ್ಪು ಪೆಟ್ಟಿಗೆ(ಬ್ಲಾಕ್​ ಬಾಕ್ಸ್​) ಹುಟಕಾಟದ ಸಮಯದಲ್ಲಿ ಈ ಡಿವಿಆರ್​ ಬಾಕ್ಸ್​ ದೊರೆತಿದೆ. ಇದರಿಂದ ಏನು ಉಪಯೋಗ? ಬ್ಲಾಕ್​​ ಬಾಕ್ಸ್​ಗೆ ಡಿವಿಆರ್​ಗೆ ಏನು ಸಂಬಂಧ? ಇದರ ಕಾರ್ಯ ಏನು ಎಂಬುದು ತಿಳಿಯೋಣ.

DVR ಎಂದ್ರೆ ಏನು..?

ವಿಮಾನ ಅಪಘಾತದಲ್ಲಿ ಕಪ್ಪು ಪೆಟ್ಟಿಗೆಗಾಗಿ ಹುಡುಕಾಟ ಸಮಯದಲ್ಲಿ ಅವಶೇಷಗಳ ತನಿಖೆಯಲ್ಲಿ ಡಿಜಿಟಲ್ ವಿಡಿಯೋ ರೆಕಾರ್ಡರ್ ಎಂದು ಕರೆಯಲ್ಪಡುವ ಡಿವಿಆರ್ ಪತ್ತೆಯಾಗಿದೆ. ವಿಮಾನದ ಚಟುವಟಿಕೆಗಳ ವೀಡಿಯೊವನ್ನು ರೆಕಾರ್ಡ್ ಮಾಡುವುದು ಇದರ ಕೆಲಸ. ಈ ಸಾಧನವು ಕ್ಯಾಬಿನ್, ಕಾಕ್‌ಪಿಟ್ ಮತ್ತು ಕೆಲವು ಬಾಹ್ಯ ಭಾಗಗಳನ್ನು ರೆಕಾರ್ಡ್ ಮಾಡುತ್ತದೆ. ಇದು ಹಾರಾಟದ ಸಮಯದಲ್ಲಿ ನಡೆಯುವ ಚಟುವಟಿಕೆಗಳ ವೀಡಿಯೊ ಡೇಟಾವನ್ನು ಒಳಗೊಂಡಿದೆ. ಇದರ ಡೇಟಾದ ಮೂಲಕ, ವಿಮಾನದಲ್ಲಿ ಕುಳಿತಿರುವ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬಹುದು ಬಳಿಕ ವಿಕ್ಷಿಸಬಹುದು.

ಇದೇನಾ ಆ ಬ್ಲಾಕ್​​ ಬಾಕ್ಸ್​..?

ಇದನ್ನೇ ಹಲವರು ಬ್ಲಾಕ್​​ ಬಾಕ್ಸ್​ ಎಂದು ನಂಬುತ್ತಾರೆ. ಅಸಲಿಗೆ ಇದು ಅದು ಅಲ್ಲ. ಬ್ಲಾಕ್​​ ಬಾಕ್ಸ್​ಗೆ ಸಹಾಯ ಮಾಡುವ ಸಾಧನ ಅಷ್ಟೇ. DVR ಹೆಚ್ಚುವರಿ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದು ಈ ಡೇಟಾದ ವೀಡಿಯೊ ರೂಪವನ್ನು ನೀಡಲು ಪ್ರಯತ್ನಿಸುತ್ತದೆ. ಆದರೆ, ಇದು ಕಪ್ಪು ಪೆಟ್ಟಿಗೆಯ ಪ್ರಮುಖ ಭಾಗವಲ್ಲ ಮತ್ತು ಪ್ರತಿ ವಿಮಾನದಲ್ಲಿ ಅದು ಇರುವುದು ಅನಿವಾರ್ಯವಲ್ಲ ಎಂದು ಹೇಳಲಾಗುತ್ತದೆ.

ಘಟನೆ ಏನು..?

ಗುಜರಾತ್​​ನ ಅಹಮದಾಬಾದ್​ ಏರ್​ಪೋರ್ಟ್​ನಲ್ಲಿ(ಜೂ.12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ ಕೇವಲ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಹಾಗೂ ಹಾಸ್ಟೇಲ್​​ನಲ್ಲಿ ಊಟಕ್ಕೆ ಕೂತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 265 ಮಂದಿ ಮೃತಪಟ್ಟಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net