ಮತಗಟ್ಟೆಗೆ ಬಂದು ಮತ ಚಲಾಯಿಸಿದ ದುನಿಯಾ ವಿಜಯ್ ಹೇಳಿದ್ದೇನು?

duniya vijay
Published on

ಬೆಂಗಳೂರು: ದುನಿಯಾ ವಿಜಯ್ ಕತ್ರಿಗುಪ್ಪೆಯ ಸರ್ಕಾರಿ ಶಾಲೆಗೆ ಆಗಮಿಸಿ ಮತ ಚಲಾಯಿಸಿದ್ದು ನಂತರ ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ.

ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್ "ಮತದಾನ ಮಾಡೋದು ನಮ್ಮ ಹಕ್ಕು. ಯಾರು ಮನೆಯಲ್ಲಿ ಸುಮ್ನೆ ಕೂರಬೇಡಿ. ಮಿಸ್ ಮಾಡದೇ ಎಲ್ಲರೂ ವೋಟ್ ಮಾಡಿ. ಎಲೆಕ್ಷನ್ 5 ವರ್ಷಕ್ಕೊಮ್ಮೆ ಬರೋದು. ಅದರ ಪ್ರಯೋಜನ ನಮಗೆ ಇರೋದು. ಬೇರೆಯವರಿಗೆ ಅಲ್ಲ. ಹಾಗಾಗಿ ಮಸ್ಟ್ ವೋಟ್ ಅಂತೀನಿ ಅಷ್ಟೇ" ಎಂದಿದ್ದಾರೆ

ಇನ್ನು ಹಣ-ಹೆಂಡಕ್ಕೆ ಮಾರು ಹೋಗೋರಿಗೆ ದುನಿಯಾ ವಿಜಿ ಕಿವಿಮಾತು ಹೇಳಿದ್ದು "ಬೇಜವಬ್ದಾರಿ ಮಾಡದೇ ವೋಟ್ ಮಾಡಿ. ಯಾವ ಸರ್ಕಾರ ಬಂದ್ರ ಬಡತನ ನಿರ್ಮೂಲನೆ ಆಗುತ್ತದೆ ಎಂದು ನೋಡಿಕೊಳ್ಳಿ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net