ಕುಡಿದ ಮತ್ತಿನಲ್ಲಿ ಸ್ನೇಹಿತರೊಂದಿಗೆ ಚಾಲೆಂಜ್​! ನೋಡ ನೋಡುತ್ತಿದ್ದಂತೆ ಕೆರೆಗೆ ಜಿಗಿದ ವ್ಯಕ್ತಿ ಸಾವು

WhatsApp Image 2024-05-23 at 7.26.43 PM
Published on

ಕಲಬುರಗಿ: ಇಲ್ಲಿನ ಕಮಲಾಪುರ ತಹಸಿಲ್‌ನಲ್ಲಿ ವಿಹಾರಕ್ಕೆಂದು ಬಂದಿದ್ದ ಹೈದರಾಬಾದ್‌ನ ಸ್ನೇಹಿತರ ಗ್ಯಾಂಗ್​ನಲ್ಲಿ ವ್ಯಕ್ತಿಯೊಬ್ಬ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದು, ಮಾತಿಗೆ ಮಾತು, ಸವಾಲಿಗೆ ಸವಾಲು ಹಾಕುತ ಹೋದವನು ಕಡೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಲಬುರ್ಗಿಯ ಚಂದ್ರಾಯನ್​ಗುಟ್ಟದಲ್ಲಿ ವರದಿಯಾಗಿದೆ.

ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತನ್ನೊಂದಿಗೆ ಇದ್ದ ಸ್ನೇಹಿತರು ಹಾಕಿದ ಸವಾಲನ್ನು ಒಪ್ಪಿ, ನೋಡ ನೋಡುತ್ತಿದ್ದಂತೆ ಕೆರೆಗೆ ಜಿಗಿದಿದ್ದಾನೆ. ಈ ಘಟನೆಯ ದೃಶ್ಯ ಆತನ ಸ್ನೇಹಿತರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆಘಾತಕಾರಿ ಸಂಗತಿಯೆಂದರೆ, ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್​ ಮಾಡಿಕೊಂಡ ಸ್ನೇಹಿತರು, ಈಜು ಬಾರದಿದ್ದರೂ ನದಿಗೆ ಜಿಗಿದ ತಮ್ಮ ಗೆಳೆಯನನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ.

ಇಡೀ ಘಟನೆಯನ್ನು ರೆಕಾರ್ಡ್​ ಮಾಡುವ ಬದಲು ಆತನನ್ನು ಸಾವಿನಿಂದ ರಕ್ಷಣೆ ಮಾಡಬಹುದಿತ್ತು. ಆದರೆ, ಈ ಪ್ರಯತ್ನಕ್ಕೆ ಸ್ನೇಹಿತರು ಮುಂದಾಗದೆ ಇದ್ದಿದ್ದು, ಇದೀಗ ಭಾರೀ ಅನುಮಾನಕ್ಕೆ ಕಾರಣವಾಗಿದೆ. ನೀರಿನ ಆಳ ತಿಳಿಯದೆ ಜಿಗಿದ ಜಾವೇದ್​ (ಮೃತ ವ್ಯಕ್ತಿ) ಮೊದಲೇ ನಿಲ್ಲಲಾಗದೆ, ಸರಿಯಾಗಿ ನಡೆಯಲಾಗದೆ ಇರುವುದು ದೃಶ್ಯದಲ್ಲಿ ಸೆರೆಯಾಗಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net