More

    ಮಧುಸೂದನ್ ತಂಡಕ್ಕೆ 3 ಸ್ಥಾನಗಳಲ್ಲಿ ಭರ್ಜರಿ ಗೆಲುವು

    ಕೆ.ಆರ್.ಪೇಟೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನೌಕರರ ಸಂಘದ 22ನೇ ತ್ರೈವಾರ್ಷಿಕ ಮಹಾಧಿವೇಶನದ ನಾಲ್ಕು ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮಧುಸೂದನ್ ತಂಡವು 3 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

    ಕೆ.ರಘು ತಂಡವು ಕೇವಲ 1 ಸ್ಥಾನ ಪಡೆದಿದೆ. ಮಧುಸೂದನ್ ತಂಡದ ಕೆ.ಮಧುಸೂಧನ್-142 ಮತಗಳು, ಕಿರಣ್ ಎಂ.ಡಿ.- 119 ಮತಗಳು, ಶ್ರೀಧರ್-118 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

    ರಘು ತಂಡದಿಂದ ಕೆ.ರಘು-110 ಮತಗಳನ್ನು ಪಡೆದು ಜಯ ಸಾಧಿಸಿದ್ದು, ಈ ತಂಡದ ಉಳಿದ ಮೂವರು ಸ್ಪರ್ಧಿಗಳಾದ ಎಚ್.ಎಸ್.ರಾಜೇಗೌಡ-73, ಜಿ.ಎಸ್.ರಾಜೇಶ್‌ಗೌಡ-73, ಅನಂತಗೌಡ-58 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಮಧುಸೂದನ್ ತಂಡದಿಂದ ಸ್ಪರ್ಧಿಸಿದ್ದ ಬೂಕನಕೆರೆ ಕೆಪಿಟಿಸಿಎಲ್ ಶಾಖೆಯ ಕಿರಿಯ ಇಂಜಿನಿಯರ್ ಟಿ.ಜಿ.ತಿಮ್ಮಪ್ಪ-106 ಮತಗಳನ್ನು ಪಡೆಯುವ ಮೂಲಕ ಕೂದಲೆಳೆಯ ಅಂತರದಲ್ಲಿ ಪರಾಜಯಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ವಕೀಲ ಎಂ.ಸಿ.ಪ್ರವೀಣ್‌ಕುಮಾರ್ ಕಾರ್ಯನಿರ್ವಹಿಸಿದರು.

    ಕೆಲ ಮತ ಅಸಿಂಧು ಗೊಂದಲ ಸೃಷ್ಟಿ: ಮತ ಎಣಿಕೆ ಸಂದರ್ಭದಲ್ಲಿ ಮತ ಹಾಕುವ ಸ್ಥಳ ಬಿಟ್ಟು ಹೆಸರಿನ ಮೇಲೆ ಮತ ಹಾಕಿದ್ದ 6 ಮತಗಳನ್ನು ಅಸಿಂಧು ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದಾಗ ಎರಡು ಬಣದ ಸದಸ್ಯರ ನಡುವೆ ಗಲಾಟೆ ನಡೆಯಿತು.

    ಏಕಪಕ್ಷೀಯವಾಗಿ ಮತ ಎಣಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಧುಸೂದನ್ ಹಾಗೂ ರಘು ಗುಂಪಿನ ಸದಸ್ಯರ ನಡುವೆ ಗಲಾಟೆ ನಡೆಯಿತು. ಅಲ್ಲದೆ ಚುನಾವಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮತ್ತೊಂದು ಗುಂಪಿನ ಸದಸ್ಯರು ಚುನಾವಣಾಧಿಕಾರಿಗಳನ್ನು ಬೆಂಬಲಿಸಿ ಗಲಾಟೆ ಆರಂಭಿಸಿತು. ಎರಡೂ ಗುಂಪಿನ ಸದಸ್ಯರ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.

    ಎರಡೂ ಬಣದ ಸದಸ್ಯರು ಮತ ಎಣಿಕೆ ಕೊಠಡಿಗೆ ನುಗ್ಗಿ ಪರಸ್ಪರ ತಳ್ಳಾಟ-ನೂಕಾಟ ಮಾಡಿದ ಕಾರಣ ಉಧ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಹಿರಿಯ ನೌಕರರು ಮಧ್ಯಪ್ರವೇಶಿಸಿ ಎರಡೂ ಬಣಗಳನ್ನು ಸಮಾಧಾನಪಡಿಸಿ ಮತ ಎಣಿಕೆ ಮಾಡಿ ಫಲಿತಾಂಶ ಘೋಷಣೆಗೆ ಅವಕಾಶ ಮಾಡಿಕೊಟ್ಟರು. ನಂತರ ಚುನಾವಣಾಧಿಕಾರಿ ಮತ ಎಣಿಕೆ ಪ್ರಕ್ರಿಯೆ ಮುಗಿಸಿ ಫಲಿತಾಂಶ ಘೋಷಣೆ ಮಾಡಿ, ವಿಜೇತ ಪ್ರತಿನಿಧಿಗಳಿಗೆ ಅಯ್ಕೆ ಘೋಷಣಾ ಪತ್ರವನ್ನು ವಿತರಿಸಿದರು.

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನೌಕರರ ಸಂಘದ 22ನೇ ತ್ರೈವಾರ್ಷಿಕ ಮಹಾಧಿವೇಶನದ ನಾಲ್ಕು ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಜೇತರಿಗೆ ಆಯ್ಕೆ ಪತ್ರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts