'ಡ್ರಗ್ಸ್ ದಂಧೆಯಲ್ಲಿ ಜಮೀರ್ ಅಹ್ಮದ್ ಪಾತ್ರ ನೂರರಷ್ಟಿದೆ', ಆದ್ರೂ ಅರೆಸ್ಟ್​ ಮಾಡ್ತಿಲ್ಲ ಏಕೆ?

Jameer Ahmad Khan
Published on

ಮಂಡ್ಯ: ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಶೇ.100 ಇದ್ದಾರೆ, ಅದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್​ನನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಸಂಜನಾ ಗಲ್ರಾನಿಯ ಗಂಡ ಅಜೀದ್ ಪಾಷಾ ಕೂಡ ಡ್ರಗ್ಸ್ ದಂಧೆಯಲ್ಲಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಕನೆಕ್ಟ್ ಇದೆ. ಇದಕ್ಕೆ ದಾವುದ್ ಇಬ್ರಾಹಿಂ ಮೂಲ ಪುರುಷ. ಆಜೀಮ್ ಅಸ್ತಾನ ಎಂಬ ದೇಶ ದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿದ್ದಾರೆ. ಡ್ರಗ್ಸ್​ ಮಾಫಿಯಾದಲ್ಲಿ ರಾಜಕೀಯ ಮುಖಂಡರು ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಶಾಸಕ ಜಮೀರ್ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರನಟರನ್ನು ಕರೆಸುತ್ತಾರೆ. ವ್ಯವಸ್ಥಿತ ಜಾಲದಲ್ಲಿ ಜಮೀರ್ ಪಾತ್ರ ನಿಶ್ಚಿತವಾಗಿದೆ ಎಂದ ಪ್ರಮೋದ್​ ಮುತಾಲಿಕ್​, ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಯಲ್ಲಿ ಡ್ರಗ್ಸ್ ಕಾರಣ ಎಂದು ಆರೋಪಿಸಿದರು.

ಸಿಸಿಬಿ ತನಿಖೆ ಬಗ್ಗೆ ನನಗೆ ವಿಶ್ವಾಸ ಇಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುತ್ತದೆ. ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ದುಷ್ಟರನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಆರೋಪಕ್ಕೆ ಮೊನ್ನೆಯಷ್ಟೇ ತಿರುಗೇಟು ನೀಡಿದ್ದ ಜಮೀರ್​, ಡ್ರಗ್ಸ್ ಕೇಸ್​ನಲ್ಲಿ ನನ್ನ ಕೈವಾಡ ಇರುವುದು ಸಾಬೀತು ಮಾಡಲಿ. ಒಂದು ವೇಳೆ ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ ಎಂದು ಸವಾಲು ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net