More

    ಪ್ರಮೋದ್​ ಮುತಾಲಿಕ್​ರ ಗಂಭೀರ ಆರೋಪ ಒಪ್ಪಿಕೊಂಡ ಪ್ರತಾಪ್​ ಸಿಂಹ

    ಮೈಸೂರು: ಡ್ರಗ್ಸ್​ ಮಾಫಿಯಾ ಕುರಿತು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಮಾಡಿದ್ದ ಗಂಭೀರ ಆರೋಪವನ್ನು ಸಂಸದ ಪ್ರತಾಪ್​ ಸಿಂಹ ಒಪ್ಪಿಕೊಂಡಿದ್ದಾರೆ.

    ಗುರುವಾರ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ್ದ ಮುತಾಲಿಕ್​, ಮೈಸೂರಿನ ಹಲವು ಕಾಲೇಜಿನಲ್ಲಿ ಡ್ರಗ್ಸ್​ ಜಾಲ ಇದೆ. ಈಗಲೂ ಕಾಲೇಜು ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಲಿ. ಅಲ್ಲಿ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಸವಾಲು ಹಾಕಿದ್ದರು. ಅಲ್ಲದೆ ನಾಲ್ಕು ಕಾಲೇಜುಗಳ ಹೆಸರನ್ನೂ ಹೇಳಿ ಅಲ್ಲಿ ಡ್ರಗ್ಸ್​ ಮಾಫಿಯಾ ನಡೆಯುತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್​ಸಿಂಹ, ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ ಎಂದರು.

    ಇದನ್ನೂ ಓದಿರಿ ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್​ ದಂಧೆ; ಪ್ರಮೋದ್​ ಮುತಾಲಿಕ್​ ಗಂಭೀರ ಆರೋಪ

    ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ. ಯಾವ ಕಾಲೇಜಿನಲ್ಲಿ ಆಗುತ್ತಿದೆ ಎಂದು ನಾನು ಹೆಸರು ಹೇಳುವುದಿಲ್ಲ. ಆದರೆ, ಬಹುತೇಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್​ ಬಳಸುತ್ತಿದ್ದಾರೆ. ಮದ್ಯಪಾನ, ಧೂಮಪಾನ‌ ಮಾಡಿದರೆ ಪೋಷಕರಿಗೆ ಗೊತ್ತಾಗುತ್ತದೆ‌. ಆದರೆ, ಡ್ರಗ್ಸ್ ಸೇವನೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಪ್ರತಾಪ್​ ಸಿಂಹ ಹೇಳಿದರು.

    ಇದು ರಾಜ್ಯಾದ್ಯಂತ ಕಂಡು‌ ಬರುತ್ತಿದೆ. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.

    ಕೋಳಿಶೆಡ್​ನಲ್ಲಿ ಬಚ್ಚಿಟ್ಟಿದ್ರು 1,352 ಕೆಜಿ ಗಾಂಜಾ, ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಿ!

    ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts