More

    ಆತ್ಮಹತ್ಯೆಯೇ ಪರಿಹಾರವಲ್ಲ!; ಮನಃಶಾಸ್ತ್ರಜ್ಞನಾಗಿ ಹಿರಿಯ ನಟ ಶಶಿಕುಮಾರ್

    ಬೆಂಗಳೂರು: ಕೌಟುಂಬಿಕ ಸಿನಿಮಾಗಳಿಂದಲೇ ಖ್ಯಾತಿ ಪಡೆದ ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ಇದೀಗ ‘ಸೆಪ್ಟೆಂಬರ್ 10’ ಶೀರ್ಷಿಕೆಯ ಸಿನಿಮಾ ಮಾಡಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಅವರು ಹೇಳಿರುವ ವಿಚಾರ ರೈತರ ಆತ್ಮಹತ್ಯೆ ಕುರಿತು. ರೈತರ ಆತ್ಮಹತ್ಯೆ ಬಗ್ಗೆ ತೆಲಂಗಾಣದ ಕ್ಯಾಪ್ಟನ್ ಜಿಜಿ ರಾವ್ ಸೆ.10 ಎಂಬ ಪುಸ್ತಕ ಬರೆದಿದ್ದರು. ಅದೇ ಪುಸ್ತಕದ ಕಥೆ ಆಧರಿಸಿ ಸಾಯಿಪ್ರಕಾಶ್ ಸಿನಿಮಾ ಮಾಡಿದ್ದು, ಈ ಚಿತ್ರದಲ್ಲಿ ಮನಃಶಾಸ್ತ್ರಜ್ಞನಾಗಿ ಹಿರಿಯ ನಟ ಶಶಿಕುಮಾರ್ ನಟಿಸಿದ್ದಾರೆ.

    ರೈತ ಆತ್ಮಹತ್ಯೆ ಜತೆಗೆ ವಿದ್ಯಾರ್ಥಿಗಳು, ಪ್ರೇಮಿಗಳ ಸಾವಿನ ಬಗ್ಗೆಯೂ ಸಿನಿಮಾದಲ್ಲಿ ಹೇಳಿದ್ದಾರೆ. ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಆತ್ಮಹತ್ಯೆ ಮಾಡಿಕೊಳ್ಳುವವರ ಮನಸ್ಥಿತಿ ಹೇಗಿರುತ್ತದೆ ಎಂಬ ಅಂಶಗಳೇ ಚಿತ್ರದ ಹೈಲೈಟ್. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲಿಯೇ ಚಿತ್ರವನ್ನು ತೆರೆಮೇಲೆ ತರಲು ನಿರ್ದೇಶಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀದೇವಿ ಫಿಲಂಸ್ ಬ್ಯಾನರ್​ನಲ್ಲಿ ನಿರ್ವಣವಾಗಿರುವ ‘ಸೆಪ್ಟೆಂಬರ್ 10’ ಚಿತ್ರದಲ್ಲಿ ರಮೇಶ್ ಭಟ್, ಸಿಹಿಕಹಿ ಚಂದ್ರು ಸೇರಿ ಹಲವರಿದ್ದಾರೆ. ಜೆಜಿ ಕೃಷ್ಣ ಛಾಯಾಗ್ರಾಹಕರಾಗಿದ್ದಾರೆ.

    ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…

    ಒಂದೇ ದಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ನ ಇಬ್ಬರು ವಿದ್ಯಾರ್ಥಿಗಳ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts