More

    ದೇಶ, ಮೋದಿಗಾಗಿ ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ: ಪ್ರತಾಪ್​ ಸಿಂಹ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.

    ಇದನ್ನೂ ಓದಿ:  ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯಿಂದ ದೇವೇಗೌಡರ ಅಳಿಯ ಕಣಕ್ಕೆ: ಡಿಕೆ ಸುರೇಶ್​ಗೆ ​ಡಾಕ್ಟರ್​ ಮಂಜುನಾಥ್​ ಸೆಡ್ಡು!

    ನಿರೀಕ್ಷೆಯಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿಕೊಂಡಿರುವ ಪ್ರತಾಪ್‌ ಸಿಂಹ ಎರಡನೇ ಪಟ್ಟಿ ಪ್ರಕಟ ಬೆನ್ನೆಲ್ಲೇ ಟ್ಟೀಟ್​ ಮಾಡಿರುವ ಅವರು, ಯದುವೀರ್‌ ಒಡೆಯರ್‌ ಅವರ ಗೆಲುವಿಗಾಗಿ ಶ್ರಮ ಹಾಕುವುದಾಗಿ ತಿಳಿಸಿದ್ದಾರೆ.

    ಈ ಕ್ಷೇತ್ರದಿಂದ ಟಿಕೆಟ್‌ ಪಡೆದುಕೊಂಡ ಮೈಸೂರು ರಾಜಮನೆತನದ ಯದುವೀರ್‌ ಒಡೆಯರ್‌ ಅವರ ಚಿತ್ರದೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರತಾಪ್‌ ಸಿಂಹ, ಮಹಾರಾಜ ಯದುವೀರ್‌ ಒಡೆಯರ್‌ ಅವರಿಗೆ ಅಭಿನಂದನೆಗಳು. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ, ದೇಶಕ್ಕಾಗಿ.. ಮೋದಿಗಾಗಿ..’ ಎಂದು ಪೋಸ್ಟ್‌ ಮಾಡಿದ್ದಾರೆ.

    ಯಾರಿಗೆ ಟಿಕೆಟ್​ ಮಿಸ್​ : ಕರ್ನಾಟಕ ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಮೈಸೂರು-ಪ್ರತಾಪ್‌ ಸಿಂಹ, ಬೆಂಗಳೂರು ಉತ್ತರ- ಡಿವಿ ಸದಾನಂದ ಗೌಡ, ಕೊಪ್ಪಳ- ಕರಡಿ ಸಂಗಣ್ಣ, ಹಾವೇರಿ-ಶಿವಕುಮಾರ್‌ ಉದಾಸಿ, ತುಮಕೂರು-ಜಿಎಸ್‌ ಬಸವರಾಜು(ನಿವೃತ್ತಿ ಘೋಷಿಸಿದ್ದರು) ದಕ್ಷಿಣ ಕನ್ನಡ-ನಳಿನ್ ಕುಮಾರ್ ಕಟೀಲ್, ಚಾಮರಾಜನಗರ-ಶ್ರೀನಿವಾಸ್ ಪ್ರಸಾದ್(ನಿವೃತ್ತಿ ಘೋಷಿಸಿದ್ದರು), ಬಳ್ಳಾರಿ- ದೇವೇಂದ್ರಪ್ಪ.

    ಅಹಮ್ಮದ್​ನಗರವನ್ನು ಅಹಲ್ಯಾ ನಗರ ಎಂದು ಮರು ನಾಮಕರಣದ ಮಹಾರಾಷ್ಟ್ರ ಸರ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts