More

    IPL 2024: ಆರ್​ಸಿಬಿ ವಿರುದ್ಧ ಟಾಸ್ ಗೆದ್ದ ಸಿಎಸ್​ಕೆ ಬೌಲಿಂಗ್​ ಆಯ್ಕೆ..!

    ಬೆಂಗಳೂರು: ಸಾಂಪ್ರದಾಯಿಕ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಇಂದು ಐಪಿಎಲ್ 2024ರ 17ನೇ ಆವೃತ್ತಿ ಐಪಿಎಲ್‌ನ ಬಹು ನಿರೀಕ್ಷಿತ ಹಣಾಹಣಿಗೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಾಡಿ ಎನಿಸಿಕೊಂಡಿದ್ದು, ಮಳೆ ಭೀತಿ ನಡುವೆಯೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಲು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ.

    ಇದನ್ನೂ ಓದಿ: ಆರ್​ಸಿಬಿ VS ಸಿಎಸ್​ಕೆ ಹೈವೋಲ್ಟೇಜ್ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಗಿ ಭದ್ರತೆ

    ಈ ಪಂದ್ಯದಲ್ಲಿ ಸಿಎಸ್​ಕೆ ಗೆದ್ದರೆ ನೇರವಾಗಿ ಪ್ಲೇ ಆಫ್‌ಗೆ ಲಗ್ಗೆ ಇಡಲಿದೆ. ಮತ್ತೊಂದೆಡೆ, ಆರ್‌ಸಿಬಿಗೆ ಕೇವಲ ಪಂದ್ಯವನ್ನು ಗೆಲ್ಲುವುದು ಮುಖ್ಯವಲ್ಲ. ಆದಾಗ್ಯೂ, ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಅತ್ಯುತ್ತಮ ನೆಟ್​ ರನ್​ರೇಟ್​ನಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿದೆ.

    ಉದ್ಘಾಟನಾ ಪಂದ್ಯದಲ್ಲಿ ಚೆನ್ನೈನಲ್ಲಿ ಅನುಭವಿಸಿದ ಸೋಲಿಗೆ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳುವ ಮೂಲಕ ಅಂಕಪಟ್ಟಿಯ ಅಗ್ರ 4 ತಂಡಗಳಲ್ಲಿ ಒಂದಾಗುವುದು ಫಾಫ್​ ಡು ಪ್ಲೆಸಿಸ್​ ಬಳಗದ ಕನಸಾಗಿದೆ. ಒಂದು ವೇಳೆ ಸಿಎಸ್​ಕೆ ತಂಡ ಪ್ಲೇಆಫ್​ ಹಂತಕ್ಕೇರದಿದ್ದರೆ, ಭಾರತೀಯ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ, ವಿಕೆಟ್​ ಕೀಪರ್-ಬ್ಯಾಟರ್​ ಎಂಎಸ್​ ಧೋನಿ ಪಾಲಿಗೆ ಇದು ಐಪಿಎಲ್​ನಲ್ಲಿ ಕೊನೆಯ ಪಂದ್ಯವಾಗಲಿದೆ.

    ಆರಂಭಿಕ 8 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದ ಆರ್​ಸಿಬಿ ನಂತರದಲ್ಲಿ ಸತತ 5 ಪಂದ್ಯ ಜಯಿಸುವ ಮೂಲಕ ಐಪಿಎಲ್​ನಲ್ಲಿ ಅಮೋವಾಗಿ ಪುಟಿದೆದ್ದಿದೆ. ಆಡಿದ 13 ಪಂದ್ಯಗಳಲ್ಲಿ ಈಗ 6 ಜಯ, 7 ಸೋಲಿನೊಂದಿಗೆ 12 ಅಂಕ ಗಳಿಸಿರುವ ಆರ್​ಸಿಬಿಗೆ ರನ್​ರೇಟ್​ ಸುಧಾರಣೆಯೂ ಪ್ಲೇಆಫ್​ ರೇಸ್​ನಲ್ಲಿ ಉಳಿದುಕೊಳ್ಳಲು ನೆರವಾಗಿದೆ. “ಹೊಸ ಅಧ್ಯಾಯ’ ಎಂಬ ಜೋಶ್​ನಲ್ಲಿ ಅಭಿಯಾನ ಆರಂಭಿಸಿದ್ದ ಆರ್​ಸಿಬಿ ಈಗ ಸತತ 4 ಪಂದ್ಯ ಗೆದ್ದರೆ ಕಪ್​ ಕನಸು ನನಸಾಗಿಸುವ ಅವಕಾಶ ಹೊಂದಿದೆ.

    ಮತ್ತೊಂದೆಡೆ ಸಿಎಸ್​ಕೆ ಆರಂಭಿಕ 2 ಪಂದ್ಯಗಳಲ್ಲಿ ಗೆದ್ದಿದ್ದರೂ, ನಂತರದಲ್ಲಿ ಅಸ್ಥಿರ ನಿರ್ವಹಣೆಯಿಂದಾಗಿ ಏಳು-ಬೀಳುಗಳನ್ನು ಕಂಡಿದೆ. ಆಡಿದ 13 ಪಂದ್ಯಗಳಲ್ಲಿ 7 ಜಯ, 6 ಸೋಲಿನೊಂದಿಗೆ 14 ಅಂಕ ಗಳಿಸಿ ಸದ್ಯಕ್ಕೆ 4ನೇ ಸ್ಥಾನದಲ್ಲಿರುವ ಸಿಎಸ್​ಕೆ, ತಾನಾಡಿದ ಕೊನೇ 7 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದು, 4ರಲ್ಲಿ ಸೋತಿದೆ.

    ಹಾಲಿ ಟೂರ್ನಿಯ ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟಾರೆ ಐಪಿಎಲ್​ ದಾಖಲೆ ಸಿಎಸ್​ಕೆ ಪರವಾಗಿದ್ದರೂ, ಸತತ 5 ಜಯದೊಂದಿಗೆ ಬೀಗುತ್ತಿರುವ ಆರ್​ಸಿಬಿ ಹಾಲಿ ಬಲಿಷ್ಠ ಫಾರ್ಮ್​ನಲ್ಲಿದೆ. ಜತೆಗೆ ಆರ್​ಸಿಬಿ ತವರಿನಲ್ಲಿ ಆಡುವ ಲಾಭವನ್ನೂ ಹೊಂದಿದೆ. ಹೀಗಾಗಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

    Sikandar: ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ಕೂರ್ಗ್ ಬೆಡಗಿ ರಶ್ಮಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts