ವಕೀಲರನ್ನು ಬಂಧಿಸಲು ಡ್ರಗ್ಸ್ ಕೇಸ್​..ಮಾಜಿ ಐಪಿಎಸ್ ಅಧಿಕಾರಿಗೆ 20 ವರ್ಷ ಜೈಲು!

ips
Published on

ಪಾಲನ್‌ಪುರ(ರಾಜಾಸ್ಥಾನ): ವಕೀಲರೊಬ್ಬರನ್ನು ಬಂಧಿಸಲು ಡ್ರಗ್ಸ್ ಇಟ್ಟಿದ್ದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದ ಸೆಷನ್ಸ್ ನ್ಯಾಯಾಲಯ ಗುರುವಾರ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಭಟ್, 1996 ರಲ್ಲಿ ವಕೀಲರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಂಡಿದ್ದಾಗಿ ಆರೋಪಿಸಿ ಅಪರಾಧ ಹೊರಿಸಿದ್ದರು.

2015ರಲ್ಲಿ ಬನಸ್ಕಾಂತ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಗ ಕರ್ತವ್ಯ ಸುರುಪಯೋಗ ಪಡಿಸಿಕೊಂಡು ಪ್ರಕರಣದಲ್ಲಿ ವಕೀಲರನ್ನು ಸಿಕ್ಕಿಹಾಕಿಸಿದ್ದರು. ಬಳಿಕ ಪೊಲೀಸ್​ ಇಲಾಖೆಯಿಂದ ಭಟ್ ವಜಾಗೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್.ಠಕ್ಕರ್ ಅವರು ಬುಧವಾರ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಭಟ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net