More

    ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ: ಸಿಜೆಐಗೆ ವಕೀಲರ ಪತ್ರದ ಕುರಿತು ಪ್ರಧಾನಿ ಮೋದಿ ತಿರುಗೇಟು

    ನವದೆಹಲಿ: ಪಟ್ಟಭದ್ರ ಹಿತಾಸಕ್ತಿ ಗುಂಪು” ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳಿಗೆ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ 600 ವಕೀಲರು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಬೆನ್ನಲ್ಲೇ, ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸಿದ್ದು, “ಬೆದರಿಸುವುದು, ಬೊಬ್ಬೆಹೊಡೆಯುವುದು ಕಾಂಗ್ರೆಸ್ ಸಂಸ್ಕೃತಿ” ಎಂದು ತಿರುಗೇಟು ನೀಡಿದರು.

    ಇದನ್ನೂ ಓದಿ: ಭಾರತೀಯ ಮೂಲದ ಈ ತಳಿಯ ಹಸು ವಿಶ್ವದಲ್ಲೇ ದುಬಾರಿ ..ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರ್ತೀರಾ!

    5 ದಶಕಗಳ ಹಿಂದೆಯೇ ಕಾಂಗ್ರೆಸ್ಸಿಗರು “ಬದ್ಧ ನ್ಯಾಯಾಂಗ”ಕ್ಕೆ ಕರೆ ನೀಡಿದ್ದರು. ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಇತರರಿಂದ ಬದ್ಧತೆಯನ್ನು ಬಯಸುತ್ತಾರೆ. ಆದರೆ ರಾಷ್ಟ್ರದ ವಿಚಾರ ಬಂದಾಗ ಯಾವುದೇ ಬದ್ಧತೆ ತೋರದೆ ದೂರವಿರುತ್ತಾರೆ” ಎಂದು ಮೋದಿ ಹೇಳಿದರು.
    “140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುವುದರಲ್ಲಿ ಆಶ್ಚರ್ಯವಿಲ್ಲ” ಎಂದು ಪ್ರಧಾನಿ ಹೇಳಿದರು. ಪ್ರಧಾನಿಯವರ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಕೀಲರು ಬರೆದ ಪತ್ರವನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

    ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ ಸುಮಾರು 600 ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ, “ಪಟ್ಟಭದ್ರ ಹಿತಾಸಕ್ತಿ ಗುಂಪು” ವಿಶೇಷ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಇದು ನ್ಯಾಯಾಲಯಗಳಿಗೆ ಮಾನಹಾನಿ ಮಾಡುವುದಾಗಿದೆ ಎಂದು ಆರೋಪಿಸಿದ್ದರು.

    ಸಿಜೆಐ ಚಂದ್ರಚೂಡ್ ಅವರ ನಾಯಕತ್ವವು ಈ “ಕಠಿಣ ಕಾಲದಲ್ಲಿ” ನಿರ್ಣಾಯಕವಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಂಗದ ಗೌರವ ಕಾಪಾಡಿಕೊಳ್ಳಲು ಬಲವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದ್ದರು.

    ವಕೀಲರ ಒಂದು ವಿಭಾಗವನ್ನು ಹೆಸರಿಸದೆ ಅವರು ಹಗಲು ರಾಜಕಾರಣಿಗಳನ್ನು ಸಮರ್ಥಿಸುತ್ತಾರೆ. ರಾತ್ರಿಯಲ್ಲಿ ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಲಾಗಿತ್ತು.

    ಕಂತುಗಳಲ್ಲಿ ಭದ್ರತಾ ಠೇವಣಿ ಪಾವತಿಸಲು ಆಫರ್..! ಚುನಾವಣಾಧಿಕಾರಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts