More

    ಕಂತುಗಳಲ್ಲಿ ಭದ್ರತಾ ಠೇವಣಿ ಪಾವತಿಸಲು ಆಫರ್..! ಚುನಾವಣಾಧಿಕಾರಿ ಹೇಳಿದ್ದೇನು?

    ತೇಜ್‌ಪುರ: ಮುಂಬರುವ ಲೋಕಸಭೆ ಚುನಾವಣೆಗೆ ಅಸ್ಸಾಂನ ತೇಜ್‌ಪುರದಿಂದ ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಯೊಬ್ಬರು ಅಪರೂಪದ ಮನವಿ ಮಾಡಿದ್ದು, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಇತರರನ್ನು ಅಚ್ಚರಿಗೆ ದೂಡಿದೆ.

    ಇದನ್ನೂ ಓದಿ: ನಾನಕಮಟ್ಟಾ ಗುರುದ್ವಾರದ ಬಾಬಾ ತಾರ್ಸೆಮ್ ಸಿಂಗ್ ಮೇಲೆ ಫೈರಿಂಗ್​: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ರಂಗಪಾರದ ನಿವಾಸಿ ಮಹೇಂದ್ರ ಒರಾಂಗ್ ಬುಧವಾರ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ತನ್ನ ಬಳಿ ಭದ್ರತಾ ಠೇವಣಿಗೆ ಹಣವಿಲ್ಲದ ಕಾರಣ ಕಂತಿನ ರೂಪದಲ್ಲಿ ಪಾವತಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ವೋಟರ್ಸ್ ಪಾರ್ಟಿ ಇಂಟರ್‌ನ್ಯಾಶನಲ್‌ನ ಅಭ್ಯರ್ಥಿ ಓರಾಂಗ್ ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಕೊನೆಯ ದಿನ ಸೋನಿತ್‌ಪುರ ಜಿಲ್ಲಾಧಿಕಾರಿ ಕಚೇರಿಗೆ ಕೇವಲ 10 ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು.

    ಆದರೆ, 25,000 ರೂ. ಭದ್ರತಾ ಮೊತ್ತ ಅವರ ಬಳಿ ಇರಲಿಲ್ಲ. ತನ್ನ ಸ್ನೇಹಿತ ಆನ್‌ಲೈನ್‌ನಲ್ಲಿ ಮೊತ್ತ ಕಳುಹಿಸಬೇಕಾಗಿತ್ತು. ಆದರೆ ಅದು ಆತನ ಖಾತೆಗೆ ಸಮಯಕ್ಕೆ ಸರಿಯಾಗಿ ಜಮೆಯಾಗಲಿಲ್ಲ. ಹೀಗಾಗಿ ಕಂತುಗಳಲ್ಲಿ ಹಣ ಪಾವತಿಸಲು ಅವಕಾಶ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಮಾಡಿದರು. ಉಳಿದ ಮೊತ್ತವನ್ನು ನಾಮಪತ್ರ ಪರಿಶೀಲನೆ ದಿನದಂದು ಜಮೆ ಮಾಡುವುದಾಗಿ ತಿಳಿಸಿದರು.

    ಆದರೆ ಅವರ ಮನವಿಯನ್ನು ತಿರಸ್ಕರಿಸಲಾಯಿತು. ಚುನಾವಣಾ ಆಯೋಗವು ಯಾವುದೇ ಅಭ್ಯರ್ಥಿಯು ಭದ್ರತಾ ಠೇವಣಿ ಇಲ್ಲದೆ ನಾಮಪತ್ರ ಸಲ್ಲಿಸಲು ಅನುಮತಿಸುವ ಯಾವುದೇ ನಿಯಮವನ್ನು ಹೊಂದಿಲ್ಲ ಎಂದು ಮಹೇಂದ್ರ ಒರಾಂಗ್ ಗೆ ತಿಳಿಸಿದರು. ಹೀಗಾಗಿ, ಒರಾಂಗ್ ನಾಮಪತ್ರ ಸಲ್ಲಿಸದೆ ಮನೆಗೆ ಮರಳಬೇಕಾಯಿತು.

    ಜನತಾ ಪ್ರಾತಿನಿಧ್ಯ ಕಾಯಿದೆ 1951 ರ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಭದ್ರತಾ ಮೊತ್ತವನ್ನು ಠೇವಣಿ ಇಡುವುದು ಕಡ್ಡಾಯವಾಗಿದೆ. ಇದು ಲೋಕಸಭೆ ಚುನಾವಣೆಗೆ 25,000 ರೂ. ಮತ್ತು ವಿಧಾನಸಭೆ ಚುನಾವಣೆಗೆ 10,000 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕ್ರಮವಾಗಿ 12500 ಮತ್ತು 5000 ರೂ. ಠೇವಣಿ ಇಡಲೇಬೇಕಾಗುತ್ತದೆ. ಒಬ್ಬ ಅಭ್ಯರ್ಥಿಯು ಚಲಾವಣೆಯಾದ ಒಟ್ಟು ಮತಗಳ ಶೇಕಡಾ 16.7 ರಷ್ಟು ಗಳಿಸಲು ವಿಫಲವಾದರೆ ಈ ಠೇವಣಿ ಕಳೆದುಕೊಳ್ಳುತ್ತಾನೆ.

    ಹೀರೋ ಸಿದ್ಧಾರ್ಥ್ ಜೊತೆ ಗುಟ್ಟಾಗಿ 3ನೇ ಮದುವೆಯಾದ ಸ್ಟಾರ್ ಹೀರೋಯಿನ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts