ಹೀರೋ ಸಿದ್ಧಾರ್ಥ್ ಜೊತೆ ಗುಟ್ಟಾಗಿ 3ನೇ ಮದುವೆಯಾದ ಸ್ಟಾರ್ ಹೀರೋಯಿನ್..!

adithi -siddarth
Published on

ಮುಂಬೈ: ಜನಪ್ರಿಯ ಸ್ಟಾರ್ ಹೀರೋ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಅವರನ್ನು ವಿವಾಹವಾಗಿದ್ದಾರೆ. ವನಪರ್ತಿ ಜಿಲ್ಲೆಯ ಶ್ರೀರಂಗ ಪುರಂನಲ್ಲಿರುವ ದೇವಸ್ಥಾನದಲ್ಲಿ ಕೆಲವೇ ಕೆಲವು ಸಂಬಂಧಿಕರ ಹಾಜರಿಯಲ್ಲಿ ಮದುವೆ ನಡೆದಿದೆ.

ಇಬ್ಬರಿಗೂ ಇದು ಎರಡನೇ ಮದುವೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಮೂಲಕ ಸಿದ್ಧಾರ್ಥ್ ಸ್ಟಾರ್ ಹೀರೋ ಆದರು. ಹುಡುಗರು ಚಿತ್ರದ ಮೂಲಕ ಹೀರೋ ಆಗಿ ಪಾದಾರ್ಪಣೆ ಮಾಡಿದ ಈ ಹೀರೋ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋ ಆಗಿದ್ದು ಗೊತ್ತೇ ಇದೆ.

ತೆಲುಗು ಇಂಡಸ್ಟ್ರಿಯಲ್ಲಿ ಸಾಲು ಸಾಲು ಹಿಟ್‌ಗಳನ್ನು ಪಡೆದು ಹುಡುಗಿಯರ ಕನಸಿನ ಹುಡುಗ ಎನಿಸಿಕೊಂಡಿದ್ದಾರೆ. ನುವ್ವು ವಸ್ತಾನಂಟೇ ನೇನೊದ್ದಂಟಾನಾ, ಚುಕ್ಕುಲ್ಲೋ ಚಂದ್ರುಡು, ಬೊಮ್ಮರಿಲ್ಲು, ಆಟ, ಕೊಂಚೆಂ ಇಷ್ಟಂ ಕೊಂಚೆಂ ಕಷ್ಟಂ, ಓಯ್, ಅನಗಗನಗ ಓ ಧೀರುಡು, ಲವ್ ಫೇಲ್ಯೂರ್, ಜಬರ್ದಸ್ತ್, ಸಮ್ ಥಿಂಗ್ ಸಮ್ ಥಿಂಗ್, ಮಹಾ ಸಮುದ್ರಂ ಮುಂತಾದ ಚಿತ್ರಗಳಲ್ಲಿ ಮಿಂಚಿದ್ದಾರೆ.

ಸಿದ್ಧಾರ್ಥ್ ಗೆ ಈ ಹಿಂದೆ ಇನ್ನು ಎರಡು ಮದುವೆ ಮಾಡಿಕೊಂಡಿದ್ದನಂತೆ. ಅವರು 2003 ರಲ್ಲಿ ಮೇಘನಾ ಎಂಬ ಹುಡುಗಿಯನ್ನು ವಿವಾಹವಾಗಿದ್ದು, 2007 ರಲ್ಲಿ ಬೇರ್ಪದ್ದರು. ಅದರ ನಂತರ ನಟಿ ಸಮಂತಾ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಬಂದಿದ್ದವು. ಇದಕ್ಕೂ ಮುನ್ನ ಮತ್ತೊಂದು ಮದುವೆ ನಡೆದಿತ್ತು ಎನ್ನಲಾಗಗುತ್ತಿದೆ.

ಈ ಮಧ್ಯೆ ಮಹಾ ಸಮುದ್ರಂ ಚಿತ್ರದಲ್ಲಿ ಸಹನಟಿಯಾಗಿದ್ದ ಅದಿತಿ ರಾವ್ ಹೈದರಿಯನ್ನು ಪ್ರೀತಿಸುತ್ತಿದ್ದರು. ಅಂದಿನಿಂದ ಸಂಬಂಧದಲ್ಲಿದ್ದಾರೆ. ಹಲವು ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಅಷ್ಟೇ ಅಲ್ಲ.. ಈ ಹಿಂದೆ ಇವರಿಬ್ಬರು ಮದುವೆ ಸುದ್ದಿಯನ್ನು ಅಲ್ಲಗಳೆದಿದ್ದರು. ಈಗ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಇದೀಗ ಈ ಸುದ್ದಿ ನೆಟ್‌ನಲ್ಲಿ ವೈರಲ್ ಆಗಿದೆ.

ಅದಿತಿ ರಾವ್ ಹೈದರಿ ಬಗ್ಗೆ ಹೇಳುವುದಾದರೆ ಈ ಹಿಂದೆ ಸತ್ಯದೀಪ್ ಮಿಶ್ರಾ ಎಂಬಾತನನ್ನು ಮದುವೆಯಾಗಿದ್ದರು, ಆದರೆ ಈ ದಂಪತಿ 2012 ರಲ್ಲಿ ಬೇರ್ಪಟ್ಟರು. ಸತ್ಯ ದೀಪ್ ಮಿಶ್ರಾ ಕಳೆದ ವರ್ಷ ಜನಪ್ರಿಯ ಡಿಸೈನರ್ ನತಿನೀನಾ ಗುಪ್ತಾ ಅವರ ಪುತ್ರಿ ಮಸಾಬಾ ಗುಪ್ತಾ ಅವರನ್ನು ವಿವಾಹವಾದರು. ಅದಿತಿ ರಾವ್ ಹೈದರಿ.. ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ.

ಈ ಚೆಲುವೆಯನ್ನು ನಿರ್ದೇಶಕ ಇಂದ್ರಗಂಟಿ ಮೋಹನ್ ಕೃಷ್ಣ ಸಮ್ಮೋಹನಂ ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯಿಸಿದರು. ಈ ಚಿತ್ರ ಹಿಟ್​ ಆಗಿತ್ತು. ಅವರು ತೆಲುಗು ಚಿತ್ರಗಳಾದ ಪ್ರತಿಶಂ, ವಿ ಮತ್ತು ಮಹಾ ಸಮುದ್ರಂನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚೆಲಿಯಾ, ಹೈ ಸಿನಾಮಿಕಾ ಮುಂತಾದ ಡಬ್ಬಿಂಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾಳೆ ಈ ಚೆಲುವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net