More

  ತಿರುಪತಿ ತಿಮ್ಮಪ್ಪ ದರ್ಶನ ಪಡೆದ ರಾಮ್ ಚರಣ್..ವಿಶೇಷತೆ ಏನು ಗೊತ್ತಾ?

  ತಿರುಪತಿ: ನಟ ರಾಮ್ ಚರಣ್ ಬುಧವಾರ39 ನೇ ವಸಂತಕ್ಕೆ ಕಾಲಿಟ್ಟಿದ್ದು, ತಿರುಪತಿ – ತಿರುಮಲೆಯ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು.

  ಇದನ್ನೂ ಓದಿ: ಚಲಿಸುತ್ತಿದ್ದ ಸ್ಕೂಟರ್​ನಲ್ಲಿ ಹುಡುಗಿಯರ ಹೋಳಿ ರೋಮ್ಯಾನ್ಸ್.. ಪೊಲೀಸರು ಹಾಕಿದ ದಂಡ ಕೇಳಿದ್ರೆ ಹೌಹಾರ್ತೀರಾ?

  ರಾಮ್​ ಚರಣ್​ ಜೊತೆಯಲ್ಲಿ ಪತ್ನಿ ಉಪಾಸನಾ ಕಾಮಿನೇನಿ ಮತ್ತು ಪುತ್ರಿ ಕ್ಲಿನ್ ಕಾರಾ ಕೊನಿಡೇಲಾ ಇದ್ದರು. ಉಪಾಸನಾ ತಾಯಿ ಶೋಬನಾ ಕಾಮಿನೇನಿ ಕೂಡ ಕುಟುಂಬದ ಇತರ ಸದಸ್ಯರೊಂದಿಗೆ ಭಾಗವಹಿಸಿದ್ದರು.

  ರಾಮ್ ಚರಣ್ ತನ್ನ ಹುಟ್ಟುಹಬ್ಬವನ್ನು ವೆಂಕಟೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿಕೊಂಡಿದ್ದು, ಈ ಸಂಬಂಧದ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ದೇವಸ್ಥಾನದಿಂದ ಹೊರಡುವಾಗ ದಂಪತಿ ಅಭಿಮಾನಿಗಳಿಗೆ ಕೈಬೀಸಿದರು. ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸುತ್ತುವರೆದಿದ್ದರು.

  ಇನ್ನು ರಾಮ್ ಮತ್ತು ಉಪಾಸನಾ ಶ್ರೀವೆಂಕಟೇಶ್ವರ ದೇವಾಲಯಕ್ಕೆ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದರು. ರಾಮ್​ ಚರಣ್​ ರೇಷ್ಮೆ ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದರೆ, ವಿಶೇಷ ದರ್ಶನಕ್ಕಾಗಿ ಉಪಾಸನಾ ಕಮಲ ಗುಲಾಬಿ ಬಣ್ಣದ ಸೀರೆಯನ್ನುಟ್ಟು ಆಗಮಿಸಿದ್ದರು. ಈ ವಿಶೇಷ ದಿನದಂದು ದಂಪತಿಗಳು ಮುಂಜಾನೆ ನಸುಕಿನಲ್ಲೇ ದೇವರ ದರ್ಶನಕ್ಕೆ ಬಂದಿದ್ದುದು ವಿಶೇಷವಾಗಿತ್ತು.

  ರಾಮ್ ಚರಣ್​ ಮುಂಬರುವ ಚಿತ್ರ ಗೇಮ್ ಚೇಂಜರ್‌ನ ಜರಗಂಡಿ ಹಾಡನ್ನು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬುಧವಾರ ಹಂಚಿಕೊಳ್ಳಲಾಗಿದೆ. ಶಂಕರ್ ನಿರ್ದೇಶನದ ದೊಡ್ಡ-ಬಜೆಟ್ ನ ಚಿತ್ರ ಇದಾಗಿದ್ದು, ಮುಂದಿನ ದಸರಾಗೆ ಥಿಯೇಟರ್‌ಗಳಿಗೆ ಬರಲಿದೆ. ಇದಲ್ಲದೆ. ಇತ್ತೀಚೆಗೆ ನಿರ್ದೇಶಕ ಬುಚ್ಚಿ ಬಾಬು ಸನಾ ಅವರೊಂದಿಗೆ ಮುಂಬರುವ ಚಿತ್ರವನ್ನು ಘೋಷಿಸಿದ್ದಾರೆ. ಈ ಪ್ರಾಜೆಕ್ಟ್‌ಗಾಗಿ ಅವರು ಮೊದಲ ಬಾರಿಗೆ ಜಾಹ್ನವಿ ಕಪೂರ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

  ರಾಮ್ ಚರಣ್ ಅವರ ಬ್ಲಾಕ್ಬಸ್ಟರ್ ಹಿಟ್ ಮಗಧೀರ ಅವರ 39 ನೇ ಹುಟ್ಟುಹಬ್ಬದ ಸಂದರ್ಭ ಥಿಯೇಟರ್ಗಳಲ್ಲಿ ಮರು-ಬಿಡುಗಡೆಯಾಗಿದೆ.

  ಮಹಾಬಲೇಶ್ವರನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ ಮಾಡಿಸುತ್ತಿರುವ ಡಿ.ಕೆ ಶಿವಕುಮಾರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts