More

    ಚಲಿಸುತ್ತಿದ್ದ ಸ್ಕೂಟರ್​ನಲ್ಲಿ ಹುಡುಗಿಯರ ಹೋಳಿ ರೋಮ್ಯಾನ್ಸ್.. ಪೊಲೀಸರು ಹಾಕಿದ ದಂಡ ಕೇಳಿದ್ರೆ ಹೌಹಾರ್ತೀರಾ?

    ನೋಯ್ಡಾ: ದೇಶದೆಲ್ಲೆಡೆ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಜನರು ಬಣ್ಣಗಳಲ್ಲಿ ಮಿಂದೆದ್ದರು. ಇದರ ನಡುವೆಯೇ ಅಂತರ್ಜಾಲದಲ್ಲಿ ವೀಡಿಯೋವೊಂದು ಹರಿದಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಕ್ರಮಕ್ಕೆ ಆಗ್ರಹಿಸುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶದ ಪೊಲೀಸರು ವೀಡಿಯೊದಲ್ಲಿದ್ದವರಿಗೆ ಭಾರಿ ದಂಡ ವಿಧಿಸಿದ್ದಾರೆ.

    ಇದನ್ನೂ ಓದಿ: ಕಮಲ್ ಹಾಸನ್ ಒಂದು ಕ್ಷಣವೂ ಬಿಡುವಿಲ್ಲದೆ ಬ್ಯುಸಿ: ಕಾರಣ ಹೀಗಿದೆ ನೋಡಿ..

    ಏನದು ವೀಡಿಯೋ?: ಚಲಿಸುತ್ತಿದ್ದ ಸ್ಕೂಟರ್‌ನಲ್ಲಿ ಹುಡುಗಿಯರು ಮುಖಾಮುಖಿಯಾಗಿ ಕುಳಿತು ಒಬ್ಬರ ಮೇಲೊಬ್ಬರು ಬಿದ್ದು, ಅಶ್ಲೀಲವಾಗಿ ವರ್ತಿಸುತ್ತ ಬಣ್ಣ ಬಳಿದುಕೊಳ್ಳುತ್ತಿದ್ದರು. ಹುಡುಗಿಯರು ಈ ಕೃತ್ಯ ನಡೆಸುತ್ತಿರುವಾಗ ಹುಡುಗ ಸ್ಕೂಟರ್ ಓಡಿಸುತ್ತಿದ್ದ. ಮತ್ತೊಬ್ಬ ವ್ಯಕ್ತಿ ವಿಡಿಯೋ ಚಿತ್ರೀಕರಿಸಿದ್ದು, ವಿಡಿಯೋ ಚಿತ್ರೀಕರಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

    ವೈರಲ್ ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್ ಮೇಲೆ ಕುಳಿತು ಬಾಲಿವುಡ್ ನ “ಮೋಹೆ ರಂಗ್ ಲಗಾಡೆ” ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದರಾ, ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದರಾ ಅಥವಾ ಪ್ರಣಯದಲ್ಲಿ ಮಗ್ನರಾಗಿದ್ದರಾ ಎಂದು ವೀಡಿಯೋ ವೀಕ್ಷಿಸಿದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದರು. ವೈರಲ್ ವೀಡಿಯೊ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

    ವೈರಲ್ ವಿಡಿಯೋ ಎಲ್ಲಿಂದ ಬಂದಿತ್ತು: ಈ ವಿಡಿಯೋ ಗ್ರೇಟರ್ ನೋಯ್ಡಾದಿಂದ ಬಂದಿದೆ ಎಂದು ವರದಿಯಾಗಿದೆ. ಒಂದೆಡೆ ಇಬ್ಬರು ಹುಡುಗಿಯರು ರೀಲ್‌ಗಳನ್ನು ಮಾಡಲು ಅನುಚಿತವಾಗಿ ವರ್ತಿಸುತ್ತಿದ್ದರೆ, ಮತ್ತೊಂದೆಡೆ ಮೂವರು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸುತ್ತಿದ್ದಾರೆ. ವಿಡಿಯೋ ಶೇರ್ ಮಾಡಲಾಗುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

    ದಂಡ: ವಿಡಿಯೋ ವೈರಲ್ ಆದ ನಂತರ ನೋಯ್ಡಾ ಪೊಲೀಸರು ದುಷ್ಕೃತ್ಯವೆಸಗಿದವರನ್ನು ಪತ್ತೆ ಹಚ್ಚಿದ್ದು, ಬರೋಬ್ಬರಿ 33,000 ರೂ. ದಂಡ ವಿಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ. ನಿಯಮಗಳ ಪ್ರಕಾರ ಇ-ಚಲನ್ (ರೂ. 33000/- ದಂಡ) ನೀಡುವ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

    ಚೆನ್ನೆಯಲ್ಲಿ ಭಾಷಾಭಿಮಾನ ಮೆರೆದ ಶ್ರೀಲೀಲಾ..ನೆಟ್ಟಿಗರು ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts