More

    ಭಾರತೀಯ ಮೂಲದ ಕೆನಡಾ ವೈದ್ಯೆಗೆ ಎಲಾನ್ ಮಸ್ಕ್ ನೆರವು!

    ನವದೆಹಲಿ: ಜಗತ್ತಿನ ಜನಪ್ರಿಯ ಮತ್ತು ಶ್ರೀಮಂತ ಎಲಾನ್ ಮಸ್ಕ್ ಸಹ ಒಬ್ಬರು. ಟೆಸ್ಲಾ ಮುಖ್ಯಸ್ಥರಾಗಿ, ಸ್ಪೇಸ್ ಎಕ್ಸ್ ಮತ್ತು ನ್ಯೂರಾಲಿಂಕ್ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಭಾರಿ ಆದಾಯವನ್ನು ಗಳಿಸುತ್ತಿದ್ದಾರೆ. ಅವರು ಇತ್ತೀಚೆಗೆ ಸಂಕಷ್ಟದಲ್ಲಿರುವ ಭಾರತೀಯ ಮೂಲದ ವೈದ್ಯೆಗೆ ನೆರವು ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಕಾರಣವಾಗಿದೆ.

    ಇದನ್ನೂ ಓದಿ: ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ: ಸಿಜೆಐಗೆ ವಕೀಲರ ಪತ್ರದ ಕುರಿತು ಪ್ರಧಾನಿ ಮೋದಿ ತಿರುಗೇಟು

    ಅದು 2020 ರ ಕರೋನಾ ಸಂದರ್ಭ. ಪ್ರತಿಯೊಬ್ಬರ ಜೀವನವನ್ನು ತಲೆಕೆಳಗಾಗಿಸಿದ್ದು, ತಿಳಿದ ಸಂಗತಿಯೇ. ಈ ಸಾಂಕ್ರಾಮಿಕ ರೋಗವು ಹರಡದಂತೆ ಲಾಕ್​ ಡೌನ್​ ಮಾಡಿದಾಗ ಇಡೀ ಜಗತ್ತನ್ನು ಸ್ತಬ್ಧವಾಗಿಸಿತ್ತು. ಇದರಿಂದ ಜನಸಾಮಾನ್ಯರಿಂದ ಹಿಡಿದು ವ್ಯಾಪಾರಸ್ಥ, ನೌಕರರು ಸೇರಿದಂತೆ ಎಲ್ಲರೂ ಹಲವು ಸಂಕಷ್ಟಕ್ಕೆ ಸಿಲುಕಿದರು. ಇದೇ ಸಂದರ್ಭ ಕೆನಡಾದಲ್ಲಿರುವ ಭಾರತೀಯ ಮೂಲದ ವೈದ್ಯೆ ಕುಲ್ವಿಂದರ್ ಕೌರ್ ಗಿಲ್ ಜನರ ನೋವನ್ನು ಕಂಡು ಭಾವುಕರಾದರು.

    ರೋಗ ಹರಡುವಿಕೆ ತಡೆಗಟ್ಟುವ ಭಾಗವಾಗಿ, ಕೆನಡಾ ಮತ್ತು ಒಂಟಾರಿಯೊ ಸರ್ಕಾರಗಳ ಲಾಕ್‌ಡೌನ್ ಮತ್ತು ವ್ಯಾಕ್ಸಿನೇಷನ್ ಆದೇಶಗಳ ವಿರುದ್ಧ ಅವರು ಟ್ವಿಟರ್‌ನಲ್ಲಿ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

    ಆದರೆ ಇದನ್ನು ಮಾಡಿದ್ದಕ್ಕಾಗಿ, ವೈದ್ಯಕೀಯ ಸಮುದಾಯ ಮತ್ತು ಮಾಧ್ಯಮ ಸೇರಿದಂತೆ ಒಟ್ಟು 23 ಜನರು ವೈದ್ಯೆ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಇದನ್ನು ಪ್ರಶ್ನಿಸಿ ಕುಲ್ವಿಂದರ್ ಸಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವುದು ಸರಿಯಲ್ಲ ಎಂದು ಹೇಳಿದ್ದರು. ವಿಚಾರಣಾ ನ್ಯಾಯಾಲಯ ಆಕೆಯ ಅರ್ಜಿಯನ್ನು ವಜಾಗೊಳಿಸಿತ್ತು. ಅರ್ಜಿದಾರರ ಪರವಾಗಿ ಕಾನೂನು ವೆಚ್ಚವಾಗಿ ಮಾರ್ಚ್ 31 ರೊಳಗೆ ಮೂರು ಲಕ್ಷ ಕೆನಡಾ ಡಾಲರ್ (ಸುಮಾರು 2 ಕೋಟಿ ರೂ.) ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿತ್ತು.

    ಆದರೆ ತನ್ನ ದುಡಿಮೆಯನ್ನೆಲ್ಲಾ ನ್ಯಾಯಾಲಯದಲ್ಲಿ ಹೋರಾಡಲು ವ್ಯಯಿಸಬೇಕಾಗಿದೆ ಎಂದು ಕುಲ್ವಿಂದರ್ ಅಳಲು ತೋಡಿಕೊಂಡಿದ್ದರು. ಇದರೊಂದಿಗೆ, ಕೆಲವು ದಾನಿಗಳಿಗೆ ಆ ಮೊತ್ತವನ್ನು ಪಾವತಿಸಲು ಹಣ ಸಹಾಯ ಮಾಡುವಂತೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮನವಿ ಮಾಡಿದ್ದರು.

    ಅನೇಕ ದಾನಿಗಳ ಜೊತೆಗೆ, ಪ್ರಸಿದ್ಧ ಬಿಲಿಯನೇರ್ ಎಲಾನ್ ಮಸ್ಕ್ ಕೂಡ ಈ ಕ್ರಮದಲ್ಲಿ ವೈದ್ಯೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ದಾನಿಗಳಿಂದ ಸಂಗ್ರಹವಾಗಿ, ಉಳಿದ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗರೆಯುತ್ತಿದ್ದಾರೆ.

    ಬ್ರೈಡಲ್ ಡಿಸೈನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ತಮನ್ನಾ​.. ಮಿಲ್ಕಿಬ್ಯೂಟಿ ಲುಕ್​ಗೆ ಸಿನಿಪ್ರಿಯರು ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts