More

  ಬ್ರೈಡಲ್ ಡಿಸೈನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ತಮನ್ನಾ​.. ಮಿಲ್ಕಿಬ್ಯೂಟಿ ಲುಕ್​ಗೆ ಸಿನಿಪ್ರಿಯರು ಫಿದಾ!

  ಚೆನ್ನೈ: ದಕ್ಷಿಣ ಭಾರತದ ಸಿನಿಇಂಡಸ್ಟ್ರಿಯಲ್ಲಿ ತನ್ನ ಸೌಂದರ್ಯರಾಶಿಯಿಂದ ಪಡ್ಡೆಹುಡುಗರ ಮನಸೂರೆಗೊಂಡಿರುವ ಮಿಲ್ಕಿ ಬ್ಯೂಟಿ ತಮನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತಮನ್ನಾ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ.

  ಇದನ್ನೂ ಓದಿ: ಆ ಕ್ರಿಕೆಟಿಗನ ಮಗಳ ಜೊತೆ ನಟಿ ಅದಿತಿಯ ಮಾಜಿ ಪತಿ! ಯಾರಿದು?

  ಒಂದೆಡೆ ನಾಯಕಿಯಾಗಿ ನಟಿಸುತ್ತಲೇ ಮತ್ತೊಂದೆಡೆ ಐಟಂ ಸಾಂಗ್‌ಗಳಲ್ಲೂ ಕುಣಿದು ಸಿನಿಪ್ರಿಯರ ನಿದ್ದೆಗೆಡಿಸುತ್ತಿರುವ ಈ ಬೆಡಗಿ ಸಿನಿಮಾ ಮಾತ್ರವಲ್ಲದೆ ಈಗ ವೆಬ್ ಸೀರಿಸ್‌ಗಳಲ್ಲಿ ನಟಿಸುವ ಮೂಲಕ ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾಳೆ.

  ಇತ್ತೀಚಿಗೆ ತನ್ನ ಗೆಳೆಯ ವಿಜಯ್ ವರ್ಮಾ ಜೊತೆ ಸುತ್ತಾಡುತ್ತಿದ್ದು, ವಧುವಿನ ಡಿಸೈನರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಮದುವೆ ಟಾಪಿಕ್​ಗೆ ಕಾರಣಳಾಗಿದ್ದಳು ತಮನ್ನಾ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗಷ್ಟೇ ಆಕೆ ತನ್ನ ಗೆಳೆಯ ವಿಜಯ್ ವರ್ಮಾ ಜೊತೆ ಕೆಲಕಾಲ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ್ದಾಳೆ. ಸ್ಟಾರ್ ಹೀರೋಯಿನ್‌ಗಳು ಒಬ್ಬರ ನಂತರ ಒಬ್ಬರು ಮದುವೆಯಾಗುತ್ತಿದ್ದಾರೆ. ಸದ್ಯದಲ್ಲೇ ಈ ತಮನ್ನಾ ಸಹ ಮದುವೆಯಾಗುವ ಲಕ್ಷಣಗಳಿವೆ.

  ತಮನ್ನಾ ವಧುವಿನ ಉಡುಗೆಯಲ್ಲಿ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದಳು. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ. ತಮನ್ನಾ ವಧು ಆಗಿದ್ದಾರಾ? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದರೆ, ತಮನ್ನಾ ಗುಟ್ಟಾಗಿ ಮದುವೆಯಾಗಿರುವ ಶಂಕೆ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದು ಕೇವಲ ಫೋಟೋ ಶೂಟ್ ಎನ್ನುತ್ತಾರೆ ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ.

  ಅವರೇ ವಿನ್ಯಾಸಗೊಳಿಸಿದ ವಧುವಿನ ವಿನ್ಯಾಸದ ಉಡುಪುಗಳಲ್ಲಿ ತಮನ್ನಾ ಮುಗ್ದ ಮತ್ತು ವೈಯ್ಯಾರದ ನೋಟದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಈ ಡ್ರೆಸ್ ನಲ್ಲಿ ಸಾಕ್ಷಾತ್​ ಮತ್ಸ್ಯಕನ್ಯೆಯಂತೆ ಕಾಣುತ್ತಾರೆ. ಇದು ನಿಜಕ್ಕೂ ಸ್ಟನ್ನಿಂಗ್ ಲುಕ್ ಎನ್ನುತ್ತಾರೆ ಅಭಿಮಾನಿಗಳು. ಇದನ್ನೆಲ್ಲ ನೋಡಿ, ಮದುವೆಯ ಶುಭ ಸುದ್ದಿಯನ್ನು ಯಾವಾಗ ಹೇಳುತ್ತೀಯಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

  ಭಾರತೀಯ ಮೂಲದ ಈ ತಳಿಯ ಹಸು ವಿಶ್ವದಲ್ಲೇ ದುಬಾರಿ ..ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರ್ತೀರಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts