More

    ಗಂಡನ ಜತೆ ಸಲುಗೆ: ಮಿಲ್ಕಿ ಬ್ಯೂಟಿ ತಮನ್ನಾ ವಿರುದ್ಧ ನಟಿ ರಂಭಾ ಅಸಮಾಧಾನ!?

    ಚೆನ್ನೈ: 90ರ ದಶಕದಲ್ಲಿ ಸಕ್ರಿಯವಾಗಿದ್ದ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ರಂಭಾ ಕೂಡ ಒಬ್ಬರು. ಮೂಲ ಹೆಸರು ವಿಜಯಲಕ್ಷ್ಮಿ ಯೀಡಿ. ರಜನಿಕಾಂತ್, ಅಜಿತ್, ವಿಜಯ್, ಸಲ್ಮಾನ್ ಖಾನ್, ಚಿರಂಜೀವಿ ಮತ್ತು ಮಮ್ಮುಟ್ಟಿ, ರವಿಚಂದ್ರನ್​, ಶಿವರಾಜ್​ ಕುಮಾರ್​ ಸೇರಿದಂತೆ ಭಾರತದ ಟಾಪ್ ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

    2010ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರಕುಮಾರ್​ ಪದ್ಮನಾಥನ್ ಅವರನ್ನು ಮದುವೆಯಾದ ನಂತರ ರಂಭಾ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಟೊರೊಂಟೊದಲ್ಲಿ ನೆಲೆಸಿದ್ದಾರೆ. ರಂಭಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ.

    ತಾಜಾ ಸಂಗತಿಯೇನೆಂದರೆ, ರಂಭಾ ಅವರು ತಮ್ಮ ಗಂಡನ ವಿಚಾರದಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಜತೆ ತನ್ನ ಗಂಡ ಸಲುಗೆಯಿಂದ ಇರುವುದನ್ನು ನೋಡಿ ರಂಭಾ ಕೋಪಗೊಂಡಿದ್ದಾರೆ ಎಂದು ತಮಿಳಿನ ಕೆಲ ವೆಬ್​ಸೈಟ್​ಗಳು ವರದಿ ಮಾಡಿವೆ.

    ಮ್ಯಾಜಿಕ್​ ಹೋಮ್​ ಬಳಿಕ ಸ್ನೇಹ
    ಉತ್ತರ ಅಮೆರಿಕದ ಪ್ರಮುಖ ಮಾಡ್ಯುಲರ್ ಇಂಟೀರಿಯರ್ಸ್ ಬ್ರ್ಯಾಂಡ್ ಮ್ಯಾಜಿಕ್‌ಹೋಮ್ ತನ್ನ ಮೊದಲ ಭಾರತೀಯ ಕೇಂದ್ರವನ್ನು ಚೆನ್ನೈನ ಅಣ್ಣಾ ನಗರದಲ್ಲಿ ಪ್ರಾರಂಭಿಸಿದೆ. ಇದರ ಸಂಸ್ಥಾಪಕ ಬೇರೆ ಯಾರು ಅಲ್ಲ, ಅದು ರಂಭಾ ಅವರ ಪತಿ ಇಂದ್ರಕುಮಾರ್​ ಪದ್ಮನಾಥನ್. ಮ್ಯಾಜಿಕ್‌ಹೋಮ್​ನ ಸಿಇಒ ಕೂಡ ಹೌದು. ಇಂದಿನ ನಗರ ಜೀವನಮಟ್ಟಕ್ಕೆ ಅನುಗುಣವಾಗಿ ಅಪ್ರತಿಮ ವಿನ್ಯಾಸ ಪರಿಹಾರಗಳು ಮತ್ತು ಉತ್ಪನ್ನಗಳನ್ನು ತಲುಪಿಸುವ ಭರವಸೆಯ ಮೇಲೆ ಮ್ಯಾಜಿಕ್​ ಹೋಮ್​​ ಬ್ರ್ಯಾಂಡ್ ಗಮನಹರಿಸುತ್ತದೆ. ಕಳೆದ ವರ್ಷ ಅಕ್ಟೋಬರ್ 28ರಂದು ನಟಿ ತಮನ್ನಾ ಭಾಟಿಯಾ ಅವರು ಉದ್ಘಾಟಿಸಿದರು. ಅಂದಿನಿಂದ ತಮನ್ನಾ ಮತ್ತು ಇಂದ್ರಕುಮಾರ್​ ನಡುವೆ ಸ್ನೇಹ ಬೆಳೆದಿದೆ ಎನ್ನಲಾಗಿದೆ.

    ಇನ್ನೂ ಫೆ.9ರಂದು ಶ್ರೀಲಂಕಾದ ಜಾಫ್ನಾದಲ್ಲಿರುವ ಮುತ್ತರವೇಲಿ ಮೈದಾನದಲ್ಲಿ ಮ್ಯಾಜಿಕ್​ ಹೋಮ್​ ವತಿಯಿಂದ ಲೈವ್​ ಕನ್ಸರ್ಟ್​ ಮತ್ತು ಸ್ಟಾರ್​ ನೈಟ್​ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೂ ತಮನ್ನಾ ಆಗಮಿಸಲಿದ್ದಾರೆ. ಖ್ಯಾತ ಗಾಯಕ ಹರಿಹರನ್​ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಮನ್ನಾ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ರಂಭಾ ಕೂಡ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಪದೇಪದೆ ತಮನ್ನಾ, ತಮ್ಮ ಗಂಡನ ಜತೆ ಕಾಣಿಸಿಕೊಳ್ಳುವುದು ರಂಭಾಗೆ ಇಷ್ಟವಿಲ್ಲ ಎಂದು ಹೇಳಲಾಗಿದೆ. ಮ್ಯಾಜಿಕ್​ ಹೋಮ್​ ಉದ್ಘಾಟನೆ ವೇಳೆಯೂ ತಮನ್ನಾ, ಇಂದ್ರಕುಮಾರ್​ ಬಹಳ ಆತ್ಮೀಯರಂತೆ ಸಂದರ್ಶನದಲ್ಲಿ ಮಾತನಾಡಿದ್ದರು. ಇಬ್ಬರ ಪರಿಚಯ ಆಳವಾಗಿದ್ದು, ರಂಭಾ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಂಭಾ, ನನ್ನ ಗಂಡ ಇನ್​ಸ್ಟಾಗ್ರಾಂನಲ್ಲಿ ನನ್ನನ್ನು ಈವರೆಗೂ ಫಾಲೋ ಮಾಡುತ್ತಿಲ್ಲ. ಮೊದಲು ನನ್ನನ್ನು ಫಾಲೋ ಮಾಡುವಂತೆ ಹೇಳಿದೆ. ಆದರೆ, ಅವರು ತಮನ್ನಾರನ್ನು ಫಾಲೋ ಮಾಡುತ್ತಿದ್ದಾರೆ. ಆಕೆಯನ್ನು ಫಾಲೋ ಮಾಡು ಆದರೆ, ಪತ್ನಿಯಾಗಿ ನನಗೆ ಹೆಚ್ಚಿನ ಆದ್ಯತೆ ಕೊಡುವಂತೆ ಹೇಳಿದ್ದೇನೆ ಎಂದು ನಗುತ್ತಲೇ ಸಂದರ್ಶನದಲ್ಲಿ ರಂಭಾ ಹೇಳಿದ್ದರು.

    ಮ್ಯಾಜಿಕ್​ ಹೋಮ್​ ಕಾರ್ಯಕ್ರಮದಲ್ಲಿ ತಮನ್ನಾ ಪದೇಪದೆ ಕಾಣಿಸಿಕೊಳ್ಳುತ್ತಿರುವುದು ಇಂಥದ್ದೊಂದು ವದಂತಿ ಹರಡಲು ಕಾರಣವಾಗಿದೆ. ಫೆ.9ರಂದು ಸ್ಟಾರ್​ ನೈಟ್​ ನಡೆಯಲಿದ್ದು, ಆ ಬಳಿಕ ಮತ್ಯಾವ ಬೆಳವಣಿಗೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಸಿನಿಉಳಗಂ)

    ಸಲಿಂಗ ಸಂಗಾತಿಯ ಮೃತದೇಹಕ್ಕಾಗಿ ಕೋರ್ಟ್​ ಮೆಟ್ಟಿಲೇರಿ ಕಣ್ಣೀರಿಟ್ಟ ವ್ಯಕ್ತಿ! ಪ್ರೋಟೋಕಾಲ್ ಹೇಳೋದೇನು?

    ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್​ ಆಗೋದು ಹೇಗೆ? Vijayavani.net ಫಾಲೋ ಮಾಡಿ ಪರೀಕ್ಷೆಗೆ ಭರ್ಜರಿ ತಯಾರಿ ನಡೆಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts