More

    ಕಾವಲಯ್ಯ ಹಾಡಿಗೆ ತಮನ್ನಾ ಮಾದಕ ಡಾನ್ಸ್​: ವಿವಾದದ ಕಿಡಿ ಹೊತ್ತಿಸಿದ ನಟ ಮನ್ಸೂರ್​ ಅಲಿ ಖಾನ್​ ಹೇಳಿಕೆ

    ಚೆನ್ನೈ: ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಸೂಪರ್​ ಸ್ಟಾರ್​ ರಜಿನಿಕಾಂತ್ ನಟನೆಯ ಜೈಲರ್​ ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಆಯಿತು. ಅದರಲ್ಲೂ ಈ ಚಿತ್ರದ ಕಾವಲಯ್ಯ ಹಾಡು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತು. ನಟಿ ತಮನ್ನಾ ತುಂಬಾ ಮಾದಕವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಡು ವೈರಲ್​ ಆಗಿದ್ದೇ ತಡ ಪ್ರತಿಯೊಬ್ಬರು ಕಾವಲಯ್ಯ ಹಾಡಿಗೆ ಸೊಂಟ ಬಳುಕಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟರು.

    ತುಂಬಾ ಖ್ಯಾತಿ ಪಡೆದ ಹಾಡನ್ನು ಇದೀಗ ತಮಿಳು ಚಿತ್ರರಂಗದ ಖ್ಯಾತ ನಟ ಮನ್ಸೂರ್​ ಅಲಿ ಖಾನ್​ ಟೀಕಿಸಿದ್ದಾರೆ. ಈ ಹಾಡಿನಲ್ಲಿ ತಮನ್ನಾ ಅವರ ಡ್ಯಾನ್ಸ್​ ಬಗ್ಗೆ ಅಮಸಧಾನ ಹೊರಹಾಕಿರುವ ಮನ್ಸೂರ್​, ಕೊಳಕು ಎಂದು ಜರಿದಿದ್ದಾರೆ.

    ತಮನ್ನಾ ತುಂಬಾ ಮಾದಕವಾಗಿ ಸೊಂಟ ಬಳುಕಿಸಿ, ಮೈಮಾಟ ಪ್ರದರ್ಶಿಸಿದ ‘ಕಾವಲಯ್ಯ’ ಹಾಡಿಗೆ ಸೆನ್ಸಾರ್ ಮಂಡಳಿಯಿಂದ ಹೇಗೆ ಅನುಮೋದನೆ ಸಿಕ್ಕಿತು ಎಂದು ಮನ್ಸೂರ್ ಅಲಿ ಖಾನ್ ಪ್ರಶ್ನಿಸಿದ್ದಾರೆ. ತಾವು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸರಕು ಚಿತ್ರದ ಕೆಲವು ದೃಶ್ಯಗಳನ್ನು ಸೆನ್ಸಾರ್​ ಬೋರ್ಡ್​ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಕಾವಲಯ್ಯ ಹಾಡನ್ನು ಉಲ್ಲೇಖಿಸಿ ಸೆನ್ಸಾರ್​ ಮಂಡಳಿಯ ನಡೆಯನ್ನು ಟೀಕಿಸಿದ್ದಾರೆ.

    ಮನ್ಸೂರ್​ ಅವರು ಕಾವಲಯ್ಯ ಹಾಡನ್ನು ಟೀಕೆ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ತಮ್ಮ ಚಿತ್ರದ ದೃಶ್ಯಗಳನ್ನು ತೆಗೆದು ಹಾಕಿದರೆಂದು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಬುದ್ಧಿ ಮಾತುಗಳನ್ನು ಮನ್ಸೂರ್​ ಅವರಿಗೆ ನೆಟ್ಟಿಗರು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಲೋಕೇಶ್ ಕನಗರಾಜ್ ನಿರ್ದೇಶನದ ವಿಜಯ್ ನಟನೆಯ ‘ಲಿಯೋ’ ಸಿನಿಮಾದಲ್ಲಿ ಮನ್ಸೂರ್ ಅಲಿ ಖಾನ್ ನಟಿಸಿದ್ದು, ಬಾಕ್ಸ್​ಆಫೀಸ್​ನಲ್ಲಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. (ಏಜೆನ್ಸೀಸ್​)

    ಹುಲಿ ಉಗುರು ಪ್ರಕರಣ: ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಏನು ಹೇಳುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ಹುಲಿ ಉಗುರು ಪ್ರಕರಣ: ನಟ ದರ್ಶನ ಮನೆಯಲ್ಲಿ ಶೋಧ; ಅರೆಸ್ಟ್ ಆಗ್ತಾರಾ ಚಾಲೆಂಜಿಂಗ್ ಸ್ಟಾರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts