ಹುಲಿ ಉಗುರು ಪ್ರಕರಣ: ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಏನು ಹೇಳುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

Varthur Santhosh

ನವದೆಹಲಿ/ಬೆಂಗಳೂರು: ಬಿಗ್​ಬಾಸ್​ ಸೀಸಸ್​ 10ರ ಸ್ಪರ್ಧಿ ವರ್ತೂರ್​ ಸಂತೋಷ್​ ಅವರನ್ನು ಹುಲಿ ಉಗುರು ಹೊಂದಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಬಂಧನ ಮಾಡಿದ ಬೆನ್ನಲ್ಲೇ ಹುಲಿ ಉಗುರು ಹೊಂದಿರುವ ಅನೇಕರಿಗೆ ಬೆದರಿಕೆ ಶುರುವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್​, ಜಗ್ಗೇಶ್​, ನಿಖಿಲ್​ ಕುಮಾರಸ್ವಾಮಿ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರ ಹೆಸರು ಪ್ರಸ್ತಾಪವಾದ ಕೂಡಲೇ ಅರಣ್ಯಾಧಿಕಾರಿಗಳು ಅವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ವರ್ತೂರ್​ ಸಂತೋಷ್​ ಅವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಲಾಗಿದ್ದು, ಆರೋಪ ಸಾಬೀತಾದಲ್ಲಿ ಕಠಿಣ ಶಿಕ್ಷೆ ಎದುರಾಗಲಿದೆ. ಈ ವನ್ಯಜೀವಿ ಕಾಯ್ದೆ ತುಂಬಾ ಪರಿಣಾಮಕಾರಿಯಾಗಿದ್ದು, ಇದರ ಕುರಿತಾದ ಮಾಹಿತಿ ಇಲ್ಲಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ವಿಶ್ವದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಪರಿಸರ ಶಾಸನಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ಅಂದರೆ ಕಾಯ್ದೆ ಜಾರಿಯಾದ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 2022ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ 2022ರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಇತಿಹಾಸ
* ಈ ಕಾಯ್ದೆಯನ್ನು 1972ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೆ ತಂದರು.
* ವನ್ಯಜೀವಿಗಳ ಬೇಟೆ ನಿಷೇಧ, ವನ್ಯಜೀವಿ ಪ್ರದೇಶಗಳು ಮತ್ತು ಆ ಪ್ರದೇಶಗಳಲ್ಲಿನ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳ ರಕ್ಷಣೆ ಮತ್ತು ನಿರ್ವಹಣೆ, ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಂತಹ ಹೊಸ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸುವುದು ಹಾಗೂ ಅಕ್ರಮ ವನ್ಯಜೀವಿ ವ್ಯಾಪಾರದ ನಿಯಂತ್ರಣ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿದೆ.
* ಇದಿಷ್ಟೇ ಅಲ್ಲದೆ, ಈ ಕಾಯಿದೆಯು ರಾಷ್ಟ್ರೀಯ ಮತ್ತು ರಾಜ್ಯ ವನ್ಯಜೀವಿ ಮಂಡಳಿ, ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು, ಇದರಿಂದಾಗಿ ದೇಶದಲ್ಲಿ ವನ್ಯಜೀವಿ ಸಂರಕ್ಷಣೆಯ ಪ್ರಯತ್ನಗಳನ್ನು ಬಲಗೊಂಡಿತು.

ಈ ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಹುಶಃ 1982, 1991, 1993, 2002 ಮತ್ತು 2006 ರಲ್ಲಿ ತಿದ್ದುಪಡಿ ಮಾಡಲಾದ ಹಾಗೂ ದೇಶದದಲ್ಲಿ ಆಗಾಗ ತಿದ್ದುಪಡಿಗೆ ಒಳಗಾದ ಕಾನೂನುಗಳಲ್ಲಿ ಒಂದಾಗಿದೆ. ಇತ್ತೀಚಗೆಷ್ಟೇ 2022ರಲ್ಲಿ ಈ ಕಾಯ್ದೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿದೆ. 2023ರ ಆಗಸ್ಟ್‌ 2ರಂದು ಲೋಕಸಭೆಯಲ್ಲಿ ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಮಸೂದೆ ಪಾಸ್​ ಮಾಡಲಾಯಿತು. ಸಸ್ಯಗಳು ಮತ್ತು ಪ್ರಾಣಿ ಪ್ರಭೇದಗಳ ರಕ್ಷಣೆ ಮಾಡೋದೆ ಈ ಕಾಯ್ದೆಯ ಮುಖ್ಯ ಉದ್ದೇಶ. ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ವಿಸ್ತರಿಸಿದೆ.

ವನ್ಯಜೀವಿ (ಸಂರಕ್ಷಣಾ) ತಿದ್ದುಪಡಿ ಕಾಯ್ದೆಯಲ್ಲಿ ಏನೇನು ಬದಲಾಯಿತು?
* ಈ ಕಾಯ್ದೆಯ ಮುನ್ನುಡಿಯಲ್ಲಿ ವನ್ಯಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳ ರಕ್ಷಣೆ ಎಂಬ ಪದಗಳ ಬದಲಿಗೆ, ಸಂರಕ್ಷಣೆ, ರಕ್ಷಣೆ ಮತ್ತು ವನ್ಯಜೀವಿಗಳ ನಿರ್ವಹಣೆ ಪದಗಳನ್ನು ಬದಲಿಸಲಾಗಿದೆ.
* ಈ ಕಾಯ್ದೆಯ ಅಡಿ ಶೆಡ್ಯೂಲ್​ಗಳ ಸಂಖ್ಯೆಯನ್ನು 6 ರಿಂದ 4ಕ್ಕೆ ಇಳಿಸಲಾಗಿದೆ.
1. ಶೆಡ್ಯೂಲ್​ I ರಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಸೇರಿದಂತೆ ಹೆಚ್ಚಿನ ಮಟ್ಟದ ರಕ್ಷಣೆಯನ್ನು ಹೊಂದುವ ಪ್ರಾಣಿ ಪ್ರಭೇದಗಳನ್ನು ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುವುದು, ಮಾರಾಟ ಮಾಡುವುದು ಮತ್ತು ಹೊಂದುವುದು ಕಾನೂನಿಗೆ ವಿರುದ್ಧವಾಗಿದೆ.
2. ಶೆಡ್ಯೂಲ್​ II ರಲ್ಲಿ ಕಡಿಮೆ ಮಟ್ಟದ ರಕ್ಷಣೆಗೆ ಒಳಪಡುವ ಪ್ರಾಣಿ ಪ್ರಭೇದಗಳು ಈ ಪಟ್ಟಿಯಲ್ಲಿ ಸೇರಿವೆ. ಮಾರಾಟವನ್ನು ನಿಷೇಧ ಮಾಡಲಾಗಿದೆ.
3. ಶೆಡ್ಯೂಲ್​ III ರಲ್ಲಿ ಸಂರಕ್ಷಿತ ಸಸ್ಯ ಜಾತಿಗಳು ಸೇರಿವೆ. ಅಲ್ಲದೆ, ಶೆಡ್ಯೂಲ್​ I ಮತ್ತು ಶೆಡ್ಯೂಲ್​ II ಕ್ಕಿಂತ ಕಡಿಮೆ ಮಟ್ಟದ ರಕ್ಷಣೆ ಹೊಂದಿರುವ ಪ್ರಾಣಿಗಳು ಹೊಂದಿದೆ.
4. ಶೆಡ್ಯೂಲ್​ IV ರಲ್ಲಿ CITES (ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗದ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ) ಅಡಿಯಲ್ಲಿ ಅನುಬಂಧಗಳಲ್ಲಿ ಪಟ್ಟಿ ಮಾಡಲಾದ ಪ್ರಾಣಿಗಳು ಸೇರಿವೆ. ಸರ್ಕಾರದ ಅನುಮತಿಯಿಲ್ಲದೆ ಈ ಪಟ್ಟಿಯಲ್ಲಿ ಬರುವ ಪ್ರಬೇಧಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮಾಡಲಾಗುವುದಿಲ್ಲ.

ಎಷ್ಟು ವರ್ಷ ಶಿಕ್ಷೆ?
ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಕ್ರಮ. ಅಕ್ರಮವಾಗಿ ಹೊಂದಿದ್ದಲ್ಲಿ, ಆರೋಪ ಸಾಬೀತಾದರೆ, ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ವರ್ತೂರ್​ ಸಂತೋಷ್​ ಪ್ರಕರಣದಲ್ಲೂ ಇದೇ ನಿಯಮ ಪಾಲನೆಯಾಗಲಿದೆ. ಒಂದು ವೇಳೆ ವರ್ತೂರ್​ ಬಳಿ ಇರುವುದು ನಿಜವಾದ ಹುಲಿ ಉಗುರು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದ್ದಲ್ಲಿ, ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸಂತೋಷ್ ಅವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3 ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000 ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

ಹುಲಿ ಉಗುರು ಪ್ರಕರಣ: ಪ್ರಭಾವಿಗಳ ಬಂಧನ ಯಾವಾಗ? ಜಾಲತಾಣದಲ್ಲಿ ಹೊತ್ತಿಕೊಂಡ ಆಕ್ರೋಶದ ಕಿಚ್ಚು

Share This Article

Relationship Tips : ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡುತ್ತಿದ್ದೀರಾ? ಈ ರೀತಿಯಲ್ಲಿ ನಿಮ್ಮ ಸಂಬಂಧ ಗಟ್ಟಿ ಮಾಡಿಕೊಳ್ಳಿ…

Relationship Tips : ಪತಿ-ಪತ್ನಿಯರ ನಡುವಿನ ಸಣ್ಣ ಜಗಳಗಳು ಸಮಯದೊಂದಿಗೆ ಪರಿಹರಿಸಲ್ಪಡುತ್ತವೆ, ಇಲ್ಲದಿದ್ದರೆ ಕೆಲವೊಮ್ಮೆ ಉದ್ವಿಗ್ನತೆ…

ಬೇಯಿಸಿದ ಮೊಟ್ಟೆ vs ಆಮ್ಲೆಟ್​… ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Omelette vs Boiled Egg

Omelette vs Boiled Egg : ಮೊಟ್ಟೆಗಳು ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಪ್ರಮುಖ ಪೋಷಕಾಂಶಗಳ…

ನಿಮ್ಮ ಕಿಡ್ನಿಗಳಿಂದ ವಿಷ ಹೊರಹಾಕಬೇಕೇ? ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಮಿಸ್​ ಮಾಡಲೇಬೇಡಿ | Kidneys Health

Kidneys Health : ಮೂತ್ರಪಿಂಡಗಳು ಅಥವಾ ಕಿಡ್ನಿಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ರಕ್ತ…