

ಮಾಸ್ಕೋ: ರಷ್ಯಾದ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್ ಬಳಿಯ ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್ ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ಇಂದು (ಆ.03) ಮಾಹಿತಿ ನೀಡಿದ್ದಾರೆ.
ಇನ್ನೂ ಈ ಉಕ್ರೇನ್‌ನ ಡ್ರೋನ್ ದಾಳಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಡ್ರೋನ್ ದಾಳಿಯಾಗುತ್ತಿದ್ದಂತೆ ತೈಲ ಡಿಪೋ ಬೆಂಕಿಗಾಹುತಿಯಾಗಿದೆ.
ನಂತರ ಬೆಂಕಿಯನ್ನು ನಂದಿಸಲು 120 ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ಸ್ಥಳದಲ್ಲಿ ಹರಸಾಹಸ ಪಟ್ಟಿದ್ದಾರೆ ಎಂದು ಕ್ರಾಸ್ನೋಡರ್ ಪ್ರಾದೇಶಿಕ ಗವರ್ನರ್ ವೆನಿಯಾಮಿನ್ ಕೊಂಡ್ರಾಟಿಯೆವ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋಗಳು ತೈಲ ಡಿಪೋದಿಂದ ದೊಡ್ಡ ಮಟ್ಟದ ಹೊಗೆ ಆಕಾಶದೆತ್ತರಕ್ಕೆ ಚಿಮ್ಮುತ್ತಿರುವುದನ್ನು ಕಾಣಬಹುದಾಗಿದೆ. ದಾಳಿಯ ನಂತರ, ರಷ್ಯಾದ ಅಧಿಕಾರಿಗಳು ಸೋಚಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಉಕ್ರೇನಿಯನ್ ಡ್ರೋನ್ ದಾಳಿಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ವೊರೊನೆಜ್ ಪ್ರದೇಶದ ಅಧಿಕಾರಿಗಳು ವರದಿ ಮಾಡಿದ್ದಾರೆ.
(ಏಜೆನ್ಸೀಸ್)
ಗುರುವಾರ ರಷ್ಯಾದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಐದು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ, ಮತ್ತೆ ಪರಸ್ಪರ ದಾಳಿಗಳು ನಡೆದಿವೆ.
ಇನ್ನೂ ರಷ್ಯಾ ಪ್ರತಿದಾಳಿ ನಡೆಸಿದ್ದು, ಕಪ್ಪು ಸಮುದ್ರದ ಮೇಲೆ ಭಾನುವಾರ ರಾತ್ರಿಯವರೆಗೆ ವಾಯು ರಕ್ಷಣಾ ಪಡೆಗಳು 93 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾ ಭಾನುವಾರ ಉಕ್ರೇನ್ ವಿರುದ್ಧ 76 ಡ್ರೋನ್‌ಗಳು ಮತ್ತು ಏಳು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಕ್ರೇನಿಯನ್ ವಾಯುಪಡೆ ತಿಳಿಸಿದೆ. 60 ಡ್ರೋನ್‌ಗಳು ಮತ್ತು ಒಂದು ಕ್ಷಿಪಣಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ.