ಡಾ.ಸುಧಾಮೂರ್ತಿ ಬಗ್ಗೆ ಅವಹೇಳನ, ವೆಬ್ ಸೀರಿಸ್ ನಿರ್ದೇಶಕನ ವಿರುದ್ಧ ದೂರು

Sudha Murthy (FILEminimizer)
Published on

ಬೆಂಗಳೂರು: ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪಿಗಳ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓಲ್ಡ್ ಟೌನ್ ಕ್ರಿಮಿನಲ್ಸ್ ವೆಬ್ ಸೀರಿಸ್ ನಿರ್ದೇಶಕ ಅಮರ ಎಂಬಾತನ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಜ್ ನಾಯ್ಡು ದೂರು ನೀಡಿದ್ದಾರೆ.

ಯೂಟ್ಯೂಬ್​ನಲ್ಲಿ ಅಮರ ಹಾಕಿರುವ ಓಲ್ಡ್ ಟೌನ್ ಕ್ರಿಮಿನಲ್ಸ್ ಸಾಕ್ಷ್ಯಚಿತ್ರದ ವೆಬ್ ಸೀರಿಸ್​ನ ಸನ್ನಿವೇಶದಲ್ಲಿ ಡಾ.ಸುಧಾಮೂರ್ತಿ ಅವರ ಹೆಸರು ಬದಲಿಸಿ ಅವಹೇಳನ ಮಾಡಲಾಗಿದೆ. ಏಕವಚನದಲ್ಲೇ ಪದಪ್ರಯೋಗ ಮಾಡಲಾಗಿದೆ. ಕರ್ನಾಟಕದ ಹೆಮ್ಮೆಯ ಮಗಳು ಸುಧಾ ಅಮ್ಮನ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಯರಾಜ್​ ನಾಯ್ಡು ದೂರಿನ ಪತ್ರದಲ್ಲಿ ಮನವಿ ಮಾಡಿದ್ದಾರೆ. ಜತಗೆ ಆ ದೃಶ್ಯದ ತುಣಕನ್ನೂ ಸಾಕ್ಷಿಯಾಗಿ ಪೊಲೀಸ್​ ಠಾಣೆಗೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net